???????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????? 
ಜಿಲ್ಲೆ

ಮಾನವ-ಚಿರತೆ ಸಹಬಾಳ್ವೆ ಅನಿವಾರ್ಯ

ಗಂಗಾಧರ ಬಿ ವಿ

* ಉಪ ಸಂರಕ್ಷಣಾ ಅರಣ್ಯಾಧಿಕಾರಿ ರಾಮಕೃಷ್ಣಯ್ಯ ಹೇಳಿಕೆ

*ಚಿರತೆ ಇತಿಹಾಸ, ಚಲನವಲನ ಪ್ರದೇಶಗಳ ಫೋಸ್ಟರ್ ಬಿಡುಗಡೆ

ವಿಜಯವಾಣಿ ಸುದ್ದಿಜಾಲ ಮಾಗಡಿ ಚಿರತೆ ಹಾಗೂ ಮಾನವ ಸಂಘರ್ಷದೊಂದಿಗೆ ಎಲ್ಲರೂ ಸಹಬಾಳ್ವೆ ಮಾಡಬೇಕಾಗಿದೆ ಎಂದು ಉಪ ಸಂರಕ್ಷಣಾ ಅರಣ್ಯಾಧಿಕಾರಿ ರಾಮಕೃಷ್ಣಯ್ಯ ತಿಳಿಸಿದರು. ತಾಲೂಕಿನ ಸಾವನದುರ್ಗ ಕೆಂಪೇಗೌಡ ಸಸ್ಯವನದಲ್ಲಿ ಅರಣ್ಯ ಇಲಾಖೆಯಿಂದ ಶುಕ್ರವಾರ ಹಮ್ಮಿಕೊಂಡಿದ್ದ ಅಂತಾರಾಷ್ಟ್ರೀಯ ಚಿರತೆ ದಿನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಚಿರತೆ ರಸ್ತೆ ದಾಟುವಾಗ ಹಾಗೂ ಎದುರಿಗೆ ಬರುವ ವಾಹನಗಳನ್ನು ಕಂಡೊಡನೆ ನಾಚಿಕೆ ಪಡುತ್ತದೆ. ಆದರೆ, ಚಿರತೆಗೆ ಅಪಾಯ ಹಾಗೂ ಜನರಿಂದ ಬೆದರಿಕೆಗೆ ಒಳಗಾದಾಗ ಎದುರಾಳಿಯನ್ನು ಎದುರಿಸಲು ತನ್ನನ್ನೂ ಬದಲಿಸಿಕೊಳ್ಳುತ್ತದೆ. ಹೀಗಿರುವಾಗ ಮಾನವ-ಚಿರತೆ ಸಂಘರ್ಷ ತಡೆಗೆ ವಿಶೇಷ ಕಾರ್ಯನೀತಿಯ ಅವಶ್ಯಕತೆ ಇದೆ ಎಂದು ಹೇಳಿದರು.

ನೂರಕ್ಕೂ ಹೆಚ್ಚು ಘಟನೆಗಳು ಸಾಕ್ಷಿ:

ಕರ್ನಾಟಕದಲ್ಲಿ ಈವರೆಗೆ ನೂರಕ್ಕೂ ಹೆಚ್ಚು ಮಾನವ-ಚಿರತೆ ಸಂಘರ್ಷಗಳು ಸಾಕ್ಷಿಯಾಗಿವೆ. ತಾಲೂಕಿನ ಬಂಟರಕುಪ್ಪೆ ಅರಣ್ಯ ಪ್ರದೇಶ ವ್ಯಾಪ್ತಿಯಲ್ಲಿ ಮೂರು ಮಂದಿ ಮೇಲೆ ಎರಗಿ ಕೊಂದಿದ್ದ ವ್ಯಾಪ್ತಿಯ 9 ಚಿರತೆಗಳನ್ನು ಸೆರೆಹಿಡಿಯಲಾಗಿದೆ. ಮನೆ ಕಾಂಪೌಂಡಿನಲ್ಲಿ ಕಟ್ಟಿದ್ದ ಸಾಕು ಪ್ರಾಣಿಗಳನ್ನು ಎತ್ತಿಕೊಂಡು ಹೋದ ದೃಶ್ಯಗಳು ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿವೆ. ಕಾಡಿನ ಯಾವುದೋ ಮೂಲೆಯಲ್ಲಿ ವಾಸವಾಗಿದ್ದ ಚಿರತೆ ಈಗ ಮನೆ ಹೊಸ್ತಿಲಿಗೆ ಬಂದು ತಲುಪಿದೆ.

ಮಾನವರ ಮೇಲೆಯೂ ದಾಳಿ ನಡೆಸಿದೆ. ಇತ್ತೀಚಿಗೆ ಬಿಡುಗಡೆಯಾದ ಚಿರತೆ ಸ್ಥಿತಿಗತಿ ವರದಿಯಲ್ಲಿ ಈ ವನ್ಯಜೀವಿಯ ಸಂಖ್ಯೆ ಕಾಡಿಗಿಂತ ಕಾಡಿನ ಹೊರಗಡೆಯೇ ಹೆಚ್ಚು ಇರುವುದು ಇನ್ನಷ್ಟು ಚಿಂತೆಗೆ ಕಾರಣವಾಗಿದೆ. ಚಿರತೆ ದಾಳಿಯಿಂದ ರೈತರು ಸಾಕಿರುವ ಕುರಿ, ಮೇಕೆ, ಹಸು ಬಲಿಯಾದರೆ ಸರ್ಕಾರ 10 ಸಾವಿರ ರೂ. ಪರಿಹಾರ ಕೊಡುತ್ತದೆ. ಮನುಷ್ಯ ಮೃತಪಟ್ಟರೆ 15 ಲಕ್ಷ ರೂ. ನೀಡಲಾಗುವುದು ಎಂದು ಮಾಹಿತಿ ನೀಡಿದರು.

ಹೊಳೆಮತ್ತಿ ನೇಚರ್ ಪೌಂಡೇಷನ್ ನಿರ್ದೇಶಕ ಡಾ.ಸಂಜಯ್ ಗುಬ್ಬಿ ಮಾತನಾಡಿ, ಚಿರತೆ ಮತ್ತು ಮಾನವ ಸಹಬಾಳ್ವೆ ಮಾಡುವಂತಹ ಪರಿಸ್ಥಿತಿ ಬಂದಿದೆ. ಈ ವೇಳೆ ಚಿರತೆ ಮತ್ತು ಮಾನವನಿಗೆ ತೊಂದರೆಯಾಗಬಾರದು. ರಾಮನಗರ, ಮೈಸೂರು, ತುಮಕೂರು, ಮಂಡ್ಯ ಚಾಮರಾಜನಗರ ಜಿಲ್ಲೆಗಳಲ್ಲಿ ಚಿರತೆ ಹೆಚ್ಚಾಗಿದ್ದು, ಮಾನವ ಮತ್ತು ಪ್ರಾಣ ಸಂಘರ್ಷ ನಡೆದಿದೆ.

ಇವುಗಳ ಚಲನವಲನ ಗಮನಿಸುವ ನಿಟ್ಟಿನಲ್ಲಿ ಅರಣ್ಯ ಸಿಬ್ಬಂದಿ ಗಾಯಗೊಳ್ಳುತ್ತಾರೆ. ಅವರಿಗೆ ಚಿಕಿತ್ಸೆಗೆೆ ಸರ್ಕಾರ 30 ಸಾವಿರ ರೂ. ವರೆಗೆ ಪರಿಹಾರ ಕೊಡುತ್ತದೆ. ಮೃತಪಟ್ಟರೆ 30 ಲಕ್ಷ ರೂ.ಪರಿಹಾರ ಕೊಡಲಾಗುತ್ತಿದೆ. ಚಿರತೆ ಕಂಡು ಬಂದರೆೆ ಅರಣ್ಯ ಇಲಾಖೆಗೆ ತಿಳಿಸಿ ಸಂರಕ್ಷಿಸಲು ಸಹಕರಿಸುವಂತೆ ಮನವಿ ಮಾಡಿದರು.

ಸಹಾಯಕ ಅರಣ್ಯಾಧಿಕಾರಿ ಗಣೇಶ್, ಸೈಯದ್ ನಿಜಾಮುದ್ದಿನ್ ಮಾತನಾಡಿದರು. ಸರ್ಕಾರಿ ಪ್ರಥಮ ದರ್ಜೆ ಕಾಲೇಜು ವಿದ್ಯಾರ್ಥಿಗಳು, ಎನ್‌ಎಸ್‌ಎಸ್ ವಿದ್ಯಾರ್ಥಿಗಳಿಗೆ ಜಾಗೃತಿ ಮೂಡಿಸಲಾಯಿತು.

ಸಾಮಾಜಿಕ ಅರಣ್ಯಾಧಿಕಾರಿ ಕೆ.ಟಿ.ಮಂಜುನಾಥ್, ಕನಕಪುರದ ವಲಯ ಅರಣ್ಯಾಧಿಕಾರಿ ಎ.ಎಲ್.ದಾಳೇಶ್, ರಾಮನಗರ ಆರ್‌ಎಫ್‌ಒ ದಿನೇಶ್, ಶೋಭಾ, ಮಹೇಶ್ ಇತರರು ಇದ್ದರು.

ಕರ್ನಾಟಕದಲ್ಲಿ 6 ಸಾವಿರ ಆನೆ, 2500 ಚಿರತೆಗಳಿದ್ದು, ಮಾಗಡಿ ತಾಲೂಕಿನಲ್ಲಿಯೇ 250ಕ್ಕೂ ಹೆಚ್ಚು ಚಿರತೆಗಳಿವೆ. ಚಿರತೆ ಜೀವಿತ ಅವಧಿ 15 ವರ್ಷ. ಈ ವ್ಯಾಪ್ತಿಯಲ್ಲಿ ಹೆಚ್ಚು ಚಿರತೆಗಳಿರುವ ಕಾರಣ ಚಿರತೆ ದಿನ ಆಚರಿಸುವ ಮೂಲಕ ವಿದ್ಯಾರ್ಥಿಗಳಿಗೆ ಅರಿವು ಮೂಡಿಸಲಾಗುತ್ತಿದೆ.
ಜಿ.ಕೆ.ಚೈತ್ರಾ, ವಲಯ ಅರಣ್ಯಾಧಿಕಾರಿ