Human health is contained in rice. 
ಜಿಲ್ಲೆ

ಅನ್ನದಲ್ಲಿ ಮಾನವ ಆರೋಗ್ಯ ಅಡಕ

Vijayapura - Desk - Doddanagouda Gudihindin

ರಬಕವಿ/ಬನಹಟ್ಟಿ: ದಿನದಲ್ಲಿ ಮೂರು ಹೊತ್ತು ಊಟ ಮಾಡುವವರನ್ನು ಶ್ರೀಮಂತರು ಎಂದು ಹೇಳಲಾಗುತ್ತದೆ. ಅನ್ನವು ದೇಹಕ್ಕೆ ಶಕ್ತಿ ನೀಡುತ್ತದೆ. ಮನುಷ್ಯನ ಆರೋಗ್ಯ ಅನ್ನದಲ್ಲಿ ಅಡಕವಾಗಿದೆ ಎಂದು ಹಳೇ ಹುಬ್ಬಳ್ಳಿಯ ವೀರಭಿಕ್ಷಾವರ್ತಿ ಮಠದ ಶ್ರೀ ಶಿವಶಂಕರ ಶಿವಾಚಾರ್ಯರು ತಿಳಿಸಿದರು.

ತಾಲೂಕಿನ ನಾವಲಗಿ ಗ್ರಾಮದ ನೀಲಕಂಠೇಶ್ವರ ಮಠದಲ್ಲಿ ಶುಕ್ರವಾರ ಆಯೋಜಿಸಿದ್ದ ಯೋಗ ಹಾಗೂ ಸಂಸ್ಕಾರ ಶಿಬಿರದಲ್ಲಿ ಆಹಾರ ಮತ್ತು ಜೀವನ ಶೈಲಿಯ ಕುರಿತು ಉಪನ್ಯಾಸ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಅನ್ನದ ಹಾಗೆ ನೀರು ಸಹ ಜೀವಕ್ಕೆ ತುಂಬ ಮುಖ್ಯ. ಅನ್ನ ಹಾಗೂ ನೀರು ಇರಲಾರದೆ ಬದುಕಲು ಸಾಧ್ಯವಿಲ್ಲ. ಅನ್ನವನ್ನು ತಿನ್ನುವ ಹಕ್ಕಿದೆ. ಆದರೆ ಬಿಸಾಡುವ ಹಕ್ಕಿಲ್ಲ. ಆದ್ದರಿಂದ ಪ್ರತಿಯೊಬ್ಬರಿಗೂ ಅನ್ನದ ಬಗ್ಗೆ ಅರಿವಿರಲಿ. ಅಕ್ಕಿ ಮಿಕ್ಕಿ ಉಳಿದರೆ ಅದನ್ನು ಇಂದಲ್ಲ ನಾಳೆ ಬೇಯಿಸಿ ತಿನ್ನಬಹುದು. ಆದರೆ, ತಯಾರಿಸಿದ ಅನ್ನ ಉಳಿದರೆ ಅದು ಹಾಳಾಗಿ ಹೋಗುತ್ತದೆ. ನಮಗೆ ಎಷ್ಟು ಬೇಕೋ ಅಷ್ಟೇ ಬಳಸಬೇಕು ಎಂದರು.

ಕನ್ಹೇರಿ ಮಠದ ಬಸವರಾಜ ಶ್ರೀಗಳು, ಹಿರಿಯರಾದ ಸುಭಾಸ ಕಂಪು, ಮಹಾಂತೇಶ ಮನ್ಮಿ, ಸಿದ್ದು ಹಳ್ಳಿ, ಮಲ್ಲಪ್ಪ ಹೂಗಾರ, ಕಾಡೇಶ ಕಂಪು, ಶಂಕರ ಹಳ್ಳಿ, ದುಂಡಯ್ಯ ಹಿರೇಮಠ ಇದ್ದರು.