ಉಡುಪಿ: ಬಾಂಗ್ಲಾ ದೇಶದಲ್ಲಿ ಹಿಂದೂಗಳ ಮೇಲೆ ನಡೆಯುತ್ತಿರುವ ಹಿಂಸಾಚಾರ ವಿರೋಧಿಸಿ ಸಮಾಜದ ಜಾಗೃತಿಗಾಗಿ ಹಿಂದೂ ಹಿತರಕ್ಷಣಾ ವೇದಿಕೆ ವತಿಯಿಂದ ಬನ್ನಂಜೆ ಶ್ರೀ ನಾರಾಯಣಗುರು ವೃತ್ತದಿಂದ ಎಂಜಿಎಂ ಕಾಲೇಜ್ ತನಕ ಬೃಹತ್ ಮಾನವ ಸರಪಳಿ ರಚಿಸಿ ಪ್ರತಿಭಟಿಸಲಾಯಿತು.
ಪ್ರತಿಭಟನೆಯಲ್ಲಿ ರಸ್ತೆಯುದ್ದಕ್ಕೂ ಶಾಸಕರು, ಮುಖಂಡರ ಸಹಿತ ನೂರಾರು ಕಾರ್ಯಕರ್ತರ ಸರತಿ ಸಾಲಿನಲ್ಲಿ ನಿಂತು, ಸಂಖ್ಯೆ ಕಡಿಮೆಯಾದರೆ ಸಂಸತಿ ನಾಶವಾದಂತೆ, ಬಾಂಗ್ಲಾ ಹಿಂದುಗಳಿಗಾಗಿ ಒಂದು ನಿಮಿಷ ನಿಲ್ಲಿ, ಬಾಂಗ್ಲಾ ಹಿಂದುಗಳಿಗಿಂದು ರಕ್ಷಣೆಯಿಲ್ಲ, ಹಿಂದುಗಳೇ ಎಚ್ಚರ! ಅಂದು ಪಾಕಿಸ್ತಾನದಲ್ಲಿ ಹಿಂದು ಹತ್ಯಾಕಾಂಡ, ಇಂದು ಬಾಂಗ್ಲಾ ದೇಶದಲ್ಲಿ. ನಾಳೆ ಯೋಚಿಸಿ, ಮುಂತಾದ ಘೋಷವಾಕ್ಯ ಹೊಂದಿರುವ ಪ್ಲೇ ಕಾರ್ಡ್ ಪ್ರದರ್ಶಿಸಿದರು.
ಜಿಲ್ಲಾಧ್ಯಕ್ಷ ಕಿಶೋರ್ ಕುಂದಾಪುರ, ಶಾಸಕರಾದ ಯಶ್ಪಾಲ್ ಸುವರ್ಣ, ಗುರ್ಮೆ ಸುರೇಶ್ ಶೆಟ್ಟಿ, ಮಾಜಿ ಸಚಿವ ಪ್ರಮೋದ್ ಮಧ್ವರಾಜ್, ಮಾಜಿ ಜಿಲ್ಲಾಧ್ಯಕ್ಷ ಮಟ್ಟಾರ್ ರತ್ನಾಕರ್ ಹೆಗ್ಡೆ, ಕಾಪು ಬಿಜೆಪಿ ಅಧ್ಯಕ್ಷ ಜಿತೇಂದ್ರ ಶೆಟ್ಟಿ ಉದ್ಯಾವರ, ಪ್ರಮುಖರಾದ ರವೀಂದ್ರ ಶೆಟ್ಟಿ ಕೊಲ್ಲಬೆಟ್ಟು, ವೀಣಾ ಶೆಟ್ಟಿ, ಶ್ರೀಶಾ ನಾಯಕ್ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.