ಹುಬ್ಬಳ್ಳಿ : ಹಳೇ ಹುಬ್ಬಳ್ಳಿಯ ಅರವಿಂದ ನಗರದಲ್ಲಿರುವ ಶ್ರೀ ಹುಲಿಗೆಮ್ಮದೇವಿ ದೇವಸ್ಥಾನದಲ್ಲಿ ಭಾರತ ಹುಣ್ಣಿಮೆ ಅಂಗವಾಗಿ ಬುಧವಾರದಂದು ಶ್ರೀ ಹುಲಿಗೆಮ್ಮದೇವಿಗೆ ಪಡ್ಡಲಿಗೆ ತುಂಬಿಸುವ ಕಾರ್ಯಕ್ರಮ ಜರುಗಿತು.
ಶ್ರೀ ದೇವಿ ಮೂರ್ತಿಗೆ ವಿಶೇಷ ಪುಷ್ಪಗಳಿಂದ ಅಲಂಕರಿಸಲಾಗಿತ್ತು. ಶ್ರೀ ಹುಲಿಗೆಮ್ಮದೇವಿಗೆ ಪಡ್ಡಲಿಗೆ ತುಂಬಿಸಿ, ಜೊಗತಿಯರಿಂದ ಜೋಗು ಹಾಕಿಸಿ, ಮಹಾಮಂಗಳಾರತಿ ನೆರವೇರಿಸಲಾಯಿತು. ಮಾತೋಶ್ರೀ ಡಾ. ಹುಲಿಗೆಮ್ಮ ಪೋಸಾ ಅಮ್ಮನವರು ಸಾನ್ನಿಧ್ಯ ವಹಿಸಿದ್ದರು.
ಕೆ.ಪಿ. ಗೋಟೂರ, ಗುರುಪಾದಗೌಡ ಪಾಟೀಲ, ಪ್ರಕಾಶ ಅರಗಂಜಿ, ಹನಮಂತಪ್ಪ ಚಲವಾದಿ, ದೇವಸ್ಥಾನದ ಪ್ರಧಾನ ಅರ್ಚಕ ರವಿಕುಮಾರ ಮಡ್ಡಿ, ಹಿರಿಯರಾದ ದೇವಕ್ಕಾ ಮದಗಾನೂರ, ವಿದ್ಯಾ ದಾಗಿನದಾರ, ರತ್ನಾ ಹೆಬ್ಬಳ್ಳಿ, ಅನ್ನಪೂರ್ಣ ಮನ್ನಾಪುರ, ಯೋಗಿಣಿ ಶೆಲ್ಲಿಕೇರಿ, ಸಂಜನಾ ಕುಲಿಗೋಡ, ರೇಖಾ ಸುಳ್ಳದ ಹಾಗೂ ಉಪಸ್ಥಿತರಿದ್ದರು.