ಹುಲಿಹೈದರ ಗ್ರಾಪಂ ಅಧ್ಯಕ್ಷ, ಉಪಾಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ ಶರಣಮ್ಮ ಕೆಲ್ಲೂರು, ಜಗದೀಶಪ್ಪ ಗದ್ದಿ ಅವರನ್ನು ಸನ್ಮಾನಿಸಲಾಯಿತು. ಪ್ರಮುಖರಾದ ಕರಿಯಪ್ಪ ನಾಯಕ, ಪರಸಪ್ಪ ಜಾಡಿ, ವಿರುಪಣ್ಣ ತಾತ ಇತರರಿದ್ದರು. 
ಜಿಲ್ಲೆ

ಹುಲಿಹೈದರ ಗ್ರಾಮಪಂಚಾಯಿತಿ ವ್ಯಾಪ್ತಿಯಲ್ಲಿ ಪಕ್ಷಾತೀತವಾಗಿ ಅಭಿವೃದ್ಧಿ ಕೆಲಸ

ಪ್ರವೀಣ ಉದುಸಾ ದಲಬಂಜನ್

ಕನಕಗಿರಿ: ತಾಲೂಕಿನ ಹುಲಿಹೈದರ ಗ್ರಾಪಂಗೆ ಎರಡನೇ ಅವಧಿಗೆ ಅಧ್ಯಕ್ಷೆ ಶರಣಮ್ಮ ಕೆಲ್ಲೂರು ಹಾಗೂ ಉಪಾಧ್ಯಕ್ಷ ಜಗದೀಶಪ್ಪ ಗದ್ದಿ ಸೋಮವಾರ ಗ್ರಾಪಂ ಕಾರ್ಯಾಲಯದಲ್ಲಿ ಹಮ್ಮಿಕೊಂಡಿದ್ದ ಪದಗ್ರಹಣ ಕಾರ್ಯಕ್ರಮದಲ್ಲಿ ಅಧಿಕಾರ ಸ್ವೀಕರಿಸಿದರು.

ಉಪಾಧ್ಯಕ್ಷ ಜಗದೀಶಪ್ಪ ಗದ್ದಿ ಮಾತನಾಡಿ, ಗ್ರಾಪಂ ವ್ಯಾಪ್ತಿಯಲ್ಲಿ ಅಭಿವೃದ್ಧಿ ಕಾರ್ಯಗಳನ್ನು ಪಕ್ಷಾತೀತವಾಗಿ ಮಾಡಲಾಗುವುದು. ಗ್ರಾಪಂನ ಎಲ್ಲ ಸದಸ್ಯರು ಸಹಕಾರ ನೀಡಬೇಕೆಂದರು.

ಗ್ರಾಪಂ ಸದಸ್ಯರಾದ ರಾಜಾಸಾಬ್, ಕುಂಟೆಪ್ಪ ಹೊಸಗುಡ್ಡ, ತಿರುಪತಿ, ಯಮನೂರ ಲಾಯದುಣಸಿ, ಅಮರೇಶಪ್ಪ ಹನುಮನಾಳ, ಬಾಳನಗೌಡ ಕನಕಾಪುರ, ಬೇಗಂ ಶ್ಯಾಮಿದಸಾಬ್, ರೇಣುಕಾ ದುರುಗಪ್ಪ, ದೇವಮ್ಮ ಚಂದ್ರಶೇಖರ, ಕನಕಗಿರಿ ಬ್ಲಾಕ್ ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷ ರಮೇಶ ನಾಯಕ, ಪ್ರಮುಖರಾದ ಅಮರಪ್ಪ ಗದ್ದಿ, ಹನುಮಂತಪ್ಪ ಗೋಡಿ, ಶಿವಜಾತಪ್ಪ ಗದ್ದಿ, ಪಿಡಿಒ ಅಮರೇಶ ರಾಥೋಡ್ ಇತರರಿದ್ದರು.