ಭಾಲ್ಕಿ ತಾಲೂಕಿನ ವಾಂಜರಖೇಡ ಹತ್ತಿರದ ಮಾಂಜ್ರಾ ನದಿಯಲ್ಲಿ ಅಕ್ರಮ ಮರಳುಗಾರಿಕೆ ಅಡ್ಡೆ ಮೇಲೆ ಶುಕ್ರವಾರ ಅಧಿಕಾರಿಗಳು ದಾಳಿ ನಡೆಸಿ ಯಂತ್ರಚಾಲಿತ ದೋಣಿಗಳನ್ನು ವಶಕ್ಕೆ ಪಡೆದರು. ವಿಶ್ವನಾಥ, ಧನರಾಜ ಬಲ್ಲೂರಕರ, ಸಂಜುಕುಮಾರ ಸಜ್ಜನಶೆಟ್ಟಿ, ಶಿವಕುಮಾರ ಬಳತೆ ಇತರರಿದ್ದರು. 
ಜಿಲ್ಲೆ

ಅಕ್ರಮ ಮರಳು ಸಾಗಣೆ ಮೂರು ದೋಣಿ ವಶಕ್ಕೆ

ರಾಜು ಯಮಕನಮರಡಿ

ಹುಲಸೂರು: ಮಾಂಜ್ರಾ ನದಿಯಲ್ಲಿ ಅಕ್ರಮ ಮರಳುಗಾರಿಕೆ ನಡೆಸುತ್ತಿದ್ದ ಮೂರು ಮೋಟಾರ್ ದೋಣಿಗಳನ್ನು ಶುಕ್ರವಾರ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ.

ಮಹಾರಾಷ್ಟ್ರ ಗಡಿಗೆ ಹೊಂದಿಕೊAಡ ಭಾಲ್ಕಿ ತಾಲೂಕಿನ ವಾಂಜರಖೇಡ ಸಮೀಪದ ಮಾಂಜ್ರಾ ನದಿಯಲ್ಲಿ ಹಲವಾರು ದಿನದಿಂದ ಅಕ್ರಮ ಮರಳು ಸಾಗಣೆ ನಡೆದಿರುವ ಬಗ್ಗೆ ಸಾರ್ವಜನಿಕರು ದೂರಿದ್ದರು.

ಶುಕ್ರವಾರ ನದಿ ದಡಕ್ಕೆ ಗಣಿ ಮತ್ತು ಭೂವಿಜ್ಞಾನ ಇಲಾಖೆ ಹಿರಿಯ ವಿಜ್ಞಾನಿ ವಿಶ್ವನಾಥ, ಧನರಾಜ ಬಲ್ಲೂರಕರ, ಉಪ ತಹಸೀಲ್ದಾರ್ ಸಂಜುಕುಮಾರ ಸಜ್ಜನಶೆಟ್ಟಿ, ಪಿಎಸ್‌ಐ ಶಿವಕುಮಾರ ಬಳತೆ ಇತರರು ತೆರಳಿ ಕಾರ್ಯಾಚರಣೆ ನಡೆಸಿದರು. ಪರವಾನಗಿ ಇಲ್ಲದೆ ಅಕ್ರಮವಾಗಿ ಮರಳುಗಾರಿಕೆಗೆ ಬಳಸುತ್ತಿದ್ದ ಮೂರು ಯಂತ್ರಚಾಲಿತ ದೋಣಿ ಮತ್ತಿತರ ಪರಿಕರಗಳನ್ನು ವಶಪಡಿಸಿಕೊಂಡಿದ್ದು, ಪ್ರಕರಣ ದಾಖಲಿಸಲಾಗಿದೆ.