ಜಿಲ್ಲೆ

ದಾಖಲೆಗಳಿಲ್ಲದ 11.49 ಲಕ್ಷ ರೂ. ಹಣ ವಶಕ್ಕೆ

ಬೆಳಗಾವಿ: ದಾಖಲೆಗಳಿಲ್ಲದ ಸಾಗಿಸುತ್ತಿದ್ದ 11.49 ಲಕ್ಷ ರೂ. ಹಣವನ್ನು ಹುಕ್ಕೇರಿ ತಾಲೂಕಿನ ಹಿಟ್ನಿ ಕ್ರಾಸ್ ಚೆಕ್ ಪೋಸ್ಟ್‌ನಲ್ಲಿ ವಶಕ್ಕೆ ಪಡೆಯಲಾಗಿದೆ. ಚುನಾವಣೆ ಕರ್ತವ್ಯದಲ್ಲಿ ನಿರತರಾಗಿದ್ದ ಎಸ್‌ಎಸ್‌ಟಿ ಹಾಗೂ ಎಫ್‌ಎಸ್‌ಟಿ, ಎಂಎಂಸಿ ನೋಡಲ್ ಅಧಿಕಾರಿಗಳು ಪೊಲೀಸರ ಸಹಾಯದಿಂದ ಹಣ ವಶಕ್ಕೆ ಪಡಿದಿದ್ದಾರೆ. ಈ ಬಗ್ಗೆ ಆದಾಯ ತೆರಿಗೆ ಇಲಾಖೆಗೆ ಪೊಲೀಸರು ಮಾಹಿತಿ ನೀಡಿದ್ದು, ತನಿಖೆ ಮುಂದುವರಿದಿದೆ. ಹುಕ್ಕೇರಿ ಹಾಗೂ ಸಂಕೇಶ್ವರದ ಸಿಪಿಐಗಳು ಪ್ರಕರಣ ಪತ್ತೆ ಸಹಕಾರ ನೀಡಿದ್ದಾರೆ.