ಚಿಕ್ಕಬಳ್ಳಾಪುರ: ಸಬಲೀಕರಣಕ್ಕೆ ಪೂರಕವಾದ ಸವಲತ್ತುಗಳನ್ನು ಬಳಸಿಕೊಂಡು ಸರ್ವಾಂಗೀಣ ಪ್ರಗತಿಯನ್ನು ಕಾಣಬೇಕು ಎಂದು ಎಂದು ಅಪರ ಜಿಲ್ಲಾಧಿಕಾರಿ ಡಾ.ಎನ್ ಭಾಸ್ಕರ್ ಸಲಹೆ ನೀಡಿದ್ದಾರೆ.
ಚಿಕ್ಕಬಳ್ಳಾಪುರ ನಗರದ ಅಂಬೇಡ್ಕರ್ ಭವನದಲ್ಲಿ ಜಿಲ್ಲಾಡಳಿತ, ಜಿ.ಪಂ, ಸಂಜೀವಿನಿ -ಡೇ-ಎನ್.ಅರ್.ಎಲ್.ಎಂ ಕೈಗೊಂಡಿದ್ದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಹಾಗೂ ಸ್ವಸಹಾಯ ಗುಂಪಿನ ಮಹಿಳಾ ಸದಸ್ಯರು ಉತ್ಪಾದಿಸಿದ ಉತ್ಪನ್ನಗಳ ಪ್ರದರ್ಶನ ಹಾಗೂ ಮಾರಾಟ ಮೇಳ
ಈ ಸಂದರ್ಭದಲ್ಲಿ ಜಿ.ಪಂ.ಉಪ ಕಾರ್ಯದರ್ಶಿ ಅತಿಕ್ ಪಾಷಾ, ಯೋಜನಾಧಿಕಾರಿ ಬಸವರಾಜಪ್ಪ, ಜಿಲ್ಲಾ ಕೌಶಲ್ಯಾಧಿಕಾರಿ ಎಂ.ಪ್ರಸಾದ್, ಮಹಿಳಾ ಮತ್ತು ಮಕ್ಕಳ ಇಲಾಖೆಯ ಉಪ ನಿರ್ದೇಶಕ ವೆಂಕಟೇಶರೆಡ್ಡಿ, ಮಾರ್ಗದರ್ಶಿ ಬ್ಯಾಂಕ್ ವ್ಯವಸ್ಥಾಪಕ ನಾಗರಾಜ್, ಪೌರಾಯುಕ್ತ ಮನ್ಸೂರ್ ಅಲಿ, ಗೌರಿಬಿದನೂರು ತಾ.ಪಂ.ಇಒ ಹೊನ್ನಯ್ಯ ಮತ್ತಿತರರು ಇದ್ದರು.
*ಎರಡು ದಿನದ ವಸ್ತು ಪ್ರದರ್ಶನ
ಮಹಿಳಾ ಸ್ವ-ಸಹಾಯ ಸಂಘಗಳು ತೆರೆದಿದ್ದ ವಿವಿಧ ಉತ್ಪನ್ನಗಳ ಪ್ರದರ್ಶನ ಮಳಿಗೆಗಳನ್ನು ಅಪರ ಜಿಲ್ಲಾಧಿಕಾರಿ ಉದ್ಘಾಟಿಸಿದರು.
ಸ್ವಸಹಾಯ ಗುಂಪಿನ ಮಹಿಳೆಯರು ಸಿದ್ಧಪಡಿಸಿದ ಕಾಟನ್ ಸೀರೆಗಳು, ಸಿದ್ಧ ಉಡುಪುಗಳು, ಆಟಿಕೆ ಸಾಮಾನು, ಖಾರ ಮತ್ತು ಸಿಹಿ ತಿನಿಸು, ಅಗರಬತ್ತಿ, ಅಗಸಿ ಚಟ್ನಿ, ಅರಿಶಿನಪುಡಿ, ಶ್ಯಾವಿಗೆ, ಮಸಾಲಾ ಮಜ್ಜಿಗೆ, ಗೃಹ ಅಲಂಕಾರಿಕ ವಸ್ತುಗಳು, ಲಂಬಾಣಿ ಉಡುಪುಗಳು, ಇಳಕಲ್ ಸೀರೆ, ಚಕ್ಕುಲಿ, ನಿಪ್ಪಟ್ಟು, ಶೇಂಗಾ ಚಿಕ್ಕಿ, ಮೈಸೂರು ಪಾಕ್ ಸೇರಿದಂತೆ ವಿವಿಧ ಉತ್ಪನ್ನಗಳನ್ನು ಪ್ರದರ್ಶನಕ್ಕಿಡಲಾಗಿದ್ದು ರಿಯಾಯಿತಿ ದರದಲ್ಲಿ ಮಾರಲಾಯಿತು.
*ರಾಜ್ಯದಲ್ಲಿ 16 ನೇ ಸ್ಥಾನ
ಲೆಕ್ಕ ನಿರ್ವಹಣೆಯಲ್ಲಿ ಜಿಲ್ಲೆಯ ಮಹಿಳಾ ಸಂಘಗಳು ರಾಜ್ಯ ಮಟ್ಟದಲ್ಲಿ 16ನೇ ಸ್ಥಾನವನ್ನು ಗಳಿಸಿವೆ.
ಜಿಲ್ಲೆಯ 10 ಸಾವಿರ ಸಂಘಗಳಲ್ಲಿನ 3.5 ಸಾವಿರ ಮಹಿಳೆಯರಿಗೆ 1.5 ಲಕ್ಷ ರೂ ಸಮುದಾಯ ಬಂಡವಾಳ ನೀಡುತ್ತಿದ್ದು ವಿವಿಧ ಆರ್ಥಿಕ ಚಟುವಟಿಕೆಯಲ್ಲಿ ತೊಡಗಿರುವ ಜಿಲ್ಲೆಯ 750 ಮಹಿಳೆಯರಿಗೆ 1 ಲಕ್ಷ ವೈಯಕ್ತಿಕ ಸಾಲ ಸಿಕ್ಕಿದೆ ಎಂದು ಡೇ-ನಲ್ಮ್ ಜಿಲ್ಲಾ ವ್ಯವಸ್ಥಾಪಕ ವೆಂಕಟಾಚಲಪತಿ ತಿಳಿಸಿದ್ದಾರೆ.
* ವಿದೇಶಗಳಲ್ಲೂ ಉತ್ಪನ್ನ ಮಾರಾಟ
ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿನ ಮಹಿಳೆಯರು ಗುಣಮಟ್ಟದ ವಿವಿಧ ಉತ್ಪನ್ನಗಳನ್ನು ತಯಾರಿಸುವಲ್ಲಿ ಮುಂಚೂಣಿಯಲ್ಲಿದ್ದಾರೆ. ಸ್ಥಳಿಯವಾಗಿ ಹಪ್ಪಳ, ಉಪ್ಪಿನಕಾಯಿ, ಸಾಂಬಾರು ಪುಡಿ, ಗುಲ್ಕನ್, ಹುಣಸೆ ತೊಕ್ಕು , ಅಲಂಕಾರಿಕ ಲೆದರ್ ಕಪೇಟ್ ಗಳನ್ನು ತಯಾರಿಸಿ, ಮಾರುವ ಮೂಲಕ ಆರ್ಥಿಕ ಪ್ರಗತಿಯನ್ನು ಹೊಂದಿದ್ದಾರೆ. ಬಾಗೇಪಲ್ಲಿ ತಾಲೂಕಿನ ಈಶ್ವರಮ್ಮ, ಚಂದ್ರಕಲಾ, ಅಶ್ವತಮ್ಮ ಎಂಬುವರು ಚರ್ಮದ ಅಲಾಂಕಾರಿಕ ವಸ್ತುಗಳನ್ನು ತಯಾರಿಸಿ ಜರ್ಮನ್, ಜಪಾನ್, ನೆದರ್ ಲ್ಯಾಂಡ್ ಸೇರಿದಂತೆ ಇತರೆ ವಿದೇಶಗಳಲ್ಲಿ ಮಾರುತ್ತಿದ್ದಾರೆ ಎಂದು ಅಪರ ಜಿಲ್ಲಾಧಿಕಾರಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.