ನೆಲಮಂಗಲ ಯೋಜನಾ ಪ್ರಾಧಿಕಾರ ಕಚೇರಿ ಮುಂದೆ ನಿರ್ಮಿಸಿದ್ದ ನೂತನ ಧ್ವಜ ಸ್ತಂಭವನ್ನು ಶಾಸಕ ಎನ್​.ಶ್ರೀನಿವಾಸ್​ ಉದ್ಘಾಟಿಸಿದರು. ನೆ.ಯೋ.ಪ್ರಾಧಿಕಾರ ಅಧ್ಯಕ್ಷ ಎಂ.ನಾರಾಯಣ್​ಗೌಡ, ನಗರಸಭೆ ಅಧ್ಯಕ್ಷ ಎನ್​.ಗಣೇಶ್​, ಉಪಾಧ್ಯಕ್ಷ ಆನಂದ್​ ಇತರರು ಇದ್ದರು. 
ಜಿಲ್ಲೆ

ನೆ.ಯೋ.ಪ್ರಾಧಿಕಾರದ ಮುಂದೆ ಬೃಹತ್​ ಧ್ವಜಸ್ತಂಭ

ನೆಲಮಂಗಲ : ಕಚೇರಿ ಮುಂಭಾಗದಲ್ಲಿ ಬೃಹತ್​ ಧ್ವಜ ಸ್ತಂಭ ನಿರ್ಮಿಸಿರುವುದು ಉತ್ತಮ ಬೆಳವಣಿಗೆ ಎಂದು ನೆ.ಯೋ.ಪ್ರಾಧಿಕಾರದ ಕಾರ್ಯಕ್ಕೆ ಶಾಸಕ ಎನ್​.ಶ್ರೀನಿವಾಸ್​ ಮೆಚ್ಚುಗೆ ವ್ಯಕ್ತಪಡಿಸಿದರು.

ಸದಾಶಿವನಗರದಲ್ಲಿನ ಪ್ರಾಧಿಕಾರ ಕಚೇರಿ ಮುಂದೆ ನಿರ್ಮಿಸಿದ್ದ ನೂತನ ಧ್ವಜ ಸ್ತಂಭವನ್ನು ಶುಕ್ರವಾರ ಉದ್ಘಾಟಿಸಿ ಮಾತನಾಡಿದ ಅವರು, ಪ್ರತಿಯೊಂದು ಸರ್ಕಾರಿ ಕಚೇರಿ ಮುಂದೆ ಧ್ವಜ ಸ್ತಂಭ ನಿರ್ಮಿಸುವ ನಿಟ್ಟಿನಲ್ಲಿ ನೆ.ಯೋ. ಪ್ರಾಧಿಕಾರದಲ್ಲಿಯೂ ನೂತನ ಧ್ವಜ ಸ್ತಂಭ ಅಳವಡಿಸಲಾಗಿದೆ. ನೆ.ಯೋ. ಪ್ರಾಧಿಕಾರದ ಅನುದಾನದಿಂದ ಸಾಕಷ್ಟು ಅಭಿವೃದ್ಧಿ ಕಾರ್ಯಗಳನ್ನು ಮಾಡಲಾಗುತ್ತಿದೆ ಎಂದರು. ನೆ.ಯೋ.ಪ್ರಾಧಿಕಾರ ಅಧ್ಯಕ್ಷ ಎಂ. ನಾರಾಯಣ್​ಗೌಡ ಮಾತನಾಡಿ, ರಾಷ್ಟ್ರೀಯ ಹಬ್ಬ ಹಾಗೂ ನಾಡ ಹಬ್ಬಗಳ ಆಚರಣೆ ವೇಳೆ ಕಚೇರಿ ಮೇಲೆ ಧ್ವಜಾರೋಹಣ ಮಾಡುತ್ತಿದ್ದು,

ನೆ.ಯೋ.ಪ್ರಾಧಿಕಾರದಿಂದ ಶಾಸಕರ ಸಹಕಾರದೊಂದಿಗೆ ನೂತನ ಧ್ವಜ ಸ್ತಂಭ ನಿರ್ಮಾಣ ಮಾಡಲಾಗಿದೆ. ಜತೆಗೆ ನೆ.ಯೋ.ಪ್ರಾಧಿಕಾರದಿಂದಲೂ ಕ್ಷೇತ್ರದ ಅಭಿವೃದ್ಧಿ ಕಾರ್ಯಕ್ರಮಗಳಿಗೆ ಹೆಚ್ಚು ಆದ್ಯತೆ ನೀಡಲಾಗುತ್ತದೆ ಎಂದರು. ನೆ.ಯೋ. ಪ್ರಾಧಿಕಾರ ಸದಸ್ಯ ಬಿ.ಜಿ.ವಾಸು, ಪ್ರಕಾಶ್​ಬಾಬು, ರಂಗಸ್ವಾಮಿ, ಜಂಟಿ ಕಾರ್ಯದರ್ಶಿ ಲ್ಮಪತಿರೆಡ್ಡಿ, ನಗರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ಪದ್ಮನಾಬ್​, ಸದಸ್ಯ ಗಂಗಾಧರ್​ರಾವ್​, ಶಿವಕುಮಾರ್​, ಸುಧಾಕೃಷ್ಣಪ್ಪ, ಮುಖಂಡ ಕೆ.ಕೃಷ್ಣಪ್ಪ, ಎಂ.ಕೆ.ನಾಗರಾಜು, ಉಮೇಶ್​, ರವಿಕುಮಾರ್​, ಮಂಜುನಾಥ್​ ಇದ್ದರು.