ಅಂಗಡಿಗಳಲ್ಲಿ ಮಾರಾಟಕ್ಕೆ ಇಟ್ಟಿರುವ ಶ್ರೀರಾಮ ದೇವರ ಚಿತ್ರವುಳ್ಳ ಪತಾಕೆಗಳು. 
ಜಿಲ್ಲೆ

ರಾಮನ ಪತಾಕೆಗೆ ಭರ್ಜರಿ ಬೇಡಿಕೆ

Prashanth S Suvarna

ಕಾರ್ಕಳ: ಅಯೋಧ್ಯೆಯಲ್ಲಿ ಶ್ರೀರಾಮನ ಪ್ರತಿಷ್ಠಾಪನೆಗೆ ಕ್ಷಣಗಣನೆ ಆರಂಭವಾಗಿದೆ. ನಾಡಿನೆಲ್ಲೆಡೆ ಸಂಭ್ರಮದ ವಾತಾವರಣ ನಿರ್ಮಾಣವಾಗಿದ್ದು, ಮಾರುಕಟ್ಟೆ, ಅಂಗಡಿ, ಮಳಿಗೆಗಳಲ್ಲಿ ಶ್ರೀರಾಮ ದೇವರ ಚಿತ್ರವುಳ್ಳ ಪತಾಕೆ ಭರ್ಜರಿಯಾಗಿ ಮಾರಾಟವಾಗುತ್ತಿವೆ. ದ.ಕ. ಹಾಗೂ ಉಡುಪಿ ಜಿಲ್ಲೆಗಳಲ್ಲಿ ಪತಾಕೆಗಳಿಗೆ ಭಾರಿ ಬೇಡಿಕೆ ಉಂಟಾಗಿದೆ.

ಬೈಕ್, ಕಾರು, ರಿಕ್ಷಾ, ಬಸ್ಸು ಸಹಿತ ಮತ್ತಿತರ ವಾಹನಗಳಲ್ಲಿ ಶ್ರೀರಾಮ ದೇವರ ಪತಾಕೆಗಳು ರಾರಾಜಿಸುತ್ತಿವೆ. ಹಳ್ಳಿ, ಪಟ್ಟಣ, ದೇವಾಲಯ ಹಾಗೂ ಪ್ರಮುಖ ಜಂಕ್ಷನ್‌ಗಳಲ್ಲಿ ಕೇಸರಿ ಪತಾಕೆಗಳನ್ನು ಬಳಸಿ ಸುಂದರವಾಗಿ ಅಲಂಕಾರ ಮಾಡಲಾಗಿದೆ. ರಾಮ ದೇವರ ಪತಾಕೆ ಖರೀದಿಸಲು ಜನ ಅಂಗಡಿಗಳಿಗೆ ಮುಗಿಬೀಳುತ್ತಿದ್ದಾರೆ. ಪತಾಕೆ ಖರೀದಿಸಲು ಜನ ಸಾಲುಗಟ್ಟಿ ನಿಲ್ಲುವ ಸ್ಥಿತಿ ಕೆಲ ಅಂಗಡಿಗಳಲ್ಲಿದೆ. ಬೇಡಿಕೆಯಷ್ಟು ಪತಾಕೆ ಪೂರೈಕೆಯಾಗುತ್ತಿಲ್ಲ ಎಂದು ಅಂಗಡಿ ಮಾಲೀಕರೊಬ್ಬರು ಹೇಳಿದ್ದಾರೆ. ನಿತ್ಯವೂ 400ರಿಂದ 600 ಪತಾಕೆ ಮಾರಾಟವಾಗುತ್ತಿವೆ. ಸಣ್ಣ ಪತಾಕೆಗೆ 40-50 ರೂ, ದೊಡ್ಡ ಪತಾಕೆಗೆ 100ರಿಂದ 500 ರೂ. ವರೆಗಿನ ಬೆಲೆಯಿದೆ.

ಬೇಡಿಕೆಗೆ ತಕ್ಕಂತೆ ಪತಾಕೆ ಪೂರೈಕೆ ಮಾಡಲಾಗುತ್ತಿಲ್ಲ. ಕಳೆದ ವಾರದಿಂದ ಭರ್ಜರಿ ವ್ಯಾಪಾರವಾಗುತ್ತಿದೆ. ದಿನಕ್ಕೆ 400 ರಿಂದ 600 ಪತಾಕೆಗಳು ಮಾರಾಟವಾಗುತ್ತಿವೆ. ಶ್ರೀರಾಮನ ಪತಾಕೆಗೆ ಎಲ್ಲೆಡೆ ಬೇಡಿಕೆ ಬಂದಿದೆ.-ನಾಗರಾಜ್ ವ್ಯಾಪರಸ್ಥ, ಕಾರ್ಕಳ