ಜಿಲ್ಲೆ

ಬೃಹತ್​ ಹಲಗೆ ಹಬ್ಬಕ್ಕೆ ಚಾಲನೆ

ಎಂ.ಎಸ್​.ಹಿರೇಮಠ ಬೆಳಗಾವಿ

ಗೋಕಾಕ: ಹಿಂದು ಜಾಗರಣ ವೇದಿಕೆ ಗೋಕಾಕ ಟಕದಿಂದ ಹಮ್ಮಿಕೊಂಡಿದ್ದ ಬಹತ್​ ಹಲಗೆ ಹಬ್ಬಕ್ಕೆ ಮಂಗಳವಾರ ನಗರದ ಕೊಳವಿ ಹನುಮಾನ ದೇವಸ್ಥಾನದಿಂದ ಚಾಲನೆ ನೀಡಲಾಯಿತು. ವಿವಿಧ ವಾದ್ಯಮೇಳದೊಂದಿಗೆ ಸಾಂಪ್ರದಾಯಿಕ ವೇಷಭೂಷಣಗಳಲ್ಲಿ ಹಲಗೆ ಬಾರಿಸುತ್ತ ಮೆರವಣಿಗೆ ಮೂಲಕ ಸಂಗೊಳ್ಳಿ ರಾಯಣ್ಣ ವೃತ್ತದವರೆಗೆ ಸಾಗಿತು. ಕಾರ್ಮಿಕ ಮುಖಂಡ ಅಂಬಿರಾವ ಪಾಟೀಲ, ಯುವ ನಾಯಕ ಅಮರನಾಥ ಜಾರಕಿಹೊಳಿ, ಆರ್​ಎಸ್​ಎಸ್​ ಪ್ರಮುಖರಾದ ಎಂ.ಐ.ಹಾರುಗೇರಿ, ನಾರಾಯಣ ಮಠಾಧಿಕಾರಿ, ಎಂ.ಡಿ.ಚುನಮರಿ, ಪ್ರಕಾಶ ವರ್ಜಿ, ಹಿಂದು ಜಾಗರಣ ವೇದಿಕೆ ಪ್ರಮುಖರಾದ ಸಮರ್ಥ ಖಾಸನೀಸ್​, ಅಂಕುಶ ರೇಣಕೆ, ಸಾಯಿ ಕೋಸಂದರ, ವಿಶ್ವ ಹಿಂದು ಪರಿಷತ್​ ಪ್ರಮುಖ ಸದಾಶಿವ ಗುದಗಗೋಳ, ಕೃಷ್ಣಾ ಕುರಬಗಟ್ಟಿ, ವಿಲಾಸ ನಾಯಿಕ ಇತರರಿದ್ದರು.