ಜಿಲ್ಲೆ

ಹೂಗಾರ ಸೊಸೈಟಿಯಿಂದ ಪ್ರತಿಭಾ ಪುರಸ್ಕಾರ

Dharwada - Basavaraj Idli

ಹುಬ್ಬಳ್ಳಿ: ವಿದ್ಯಾಥಿರ್ಗಳು ಸ್ಪರ್ಧಾತ್ಮಕ ಪರೀಕ್ಷೆಗಳತ್ತ ಹೆಚ್ಚಿನ ಗಮನ ಹರಿಸಬೇಕು. ಇದಕ್ಕೆ ಅಗತ್ಯ ಸಹಾಯ ಬೇಕಾದರೆ ತಮ್ಮ ಕೈಲಾದ ನೆರವು ನೀಡಲಾಗುವುದು ಎಂದು ಧಾರವಾಡ ತಹಸೀಲ್ದಾರ್ ದೊಡ್ಡಪ್ಪ ಹೂಗಾರ ಹೇಳಿದರು.

ಇಲ್ಲಿನ ಜೆ.ಸಿ. ನಗರದ ನೌಕರರ ಭವನದಲ್ಲಿ ಭಾನುವಾರ ಆಯೋಜಿಸಿದ್ದ ಹೂಗಾರ ವಿವಿಧೋದ್ದೇಶಗಳ ಸೌಹಾರ್ದ ಸಹಕಾರಿ ನಿಯಮಿತದ ವಾಷಿರ್ಕ ಸರ್ವಸಾಧಾರಣ ಸಭೆ ಹಾಗೂ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಜೀವನದಲ್ಲಿ ಬರುವ ಎಲ್ಲ ಹಂತಗಳನ್ನು ದಾಟಿ ಮೇಲೆ ಬಂದಾಗ ಸಿಗುವ ಸಂತಸಕ್ಕೆ ಪಾರವೇ ಇರುವುದಿಲ್ಲ. ನಮ್ಮ ಪರಿಶ್ರಮವೇ ನಮ್ಮ ಸಾಧನೆಗೆ ಮೆಟ್ಟಿಲಾಗಬೇಕು ಎಂದರು.

ಧಾರವಾಡ ಜಿಲ್ಲಾ ತರಬೇತಿ ಸಂಸ್ಥೆಯ ಪ್ರಾಚಾರ್ಯ ನಾಗರತ್ನಾ ಹೂಗಾರ ಮಾತನಾಡಿ, ಸಮಾಜದಲ್ಲಿ ಅತ್ಯಂತ ಹಿಂದುಳಿದವರನ್ನು ಗುರುತಿಸಿ ಪ್ರೋತ್ಸಾಹಿಸುವ ಕೆಲಸ ಸಮಾಜದಿಂದ ಆಗಬೇಕಾಗಿದೆ. ಇದಕ್ಕೆ ಸಮಾಜದ ಪ್ರತಿಯೊಬ್ಬರೂ ಕೈ ಜೋಡಿಸುವುದು ಅವಶ್ಯವಾಗಿದೆ ಎಂದರು.

ಡಾ. ವಿಜಯಮಹಾಂತೇಶ ಪೂಜಾರಿ ಮಾತನಾಡಿದರು. ಸಹಕಾರಿ ಸಂದ ಅಧ್ಯಕ್ಷ ಲೋಚನೇಶ ಹೂಗಾರ ಅಧ್ಯಕ್ಷತೆ ವಹಿಸಿದ್ದರು.

ಬ್ಯಾಂಕಿನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಮೇಶ ಹೂಗಾರ ವಾಷಿರ್ಕ ವರದಿ ವಾಚಿಸಿದರು.
ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಶಿವಾನಂದ ಹೂಗಾರ, ಸಿದ್ದು ಹೂಗಾರ, ಸರೋಜಾ ಹೂಗಾರ, ಗುರುರಾಜ ಹೂಗಾರ, ಸರ್ವಮಂಗಳಾ ಪೂಜಾರ ಹಾಗೂ ವಿದ್ಯಾಥಿರ್ಗಳಾದ ಸುಪ್ರಿಯಾ ಪೂಜಾರ, ಸಹನಾ ಪೂಜಾರ, ದೇವಕ್ಕಾ ಹೂಗಾರ, ಸೃಜನ್ ಹೂಗಾರ, ನಂದೀಶ ಹೂಗಾರ, ಶಂಕರ ಹೂಗಾರ, ಶ್ವೇತಾ ಹೂಗಾರ, ಸೃಷ್ಟಿ ಹೂಗಾರ, ಸಂಚಿತಾ ಹೂಗಾರ, ಅಭಿಷೇಕ ಹೂಗಾರ ಅವರನ್ನು ಸನ್ಮಾನಿಸಲಾಯಿತು.

ಬ್ಯಾಂಕ್ ಉಪಾಧ್ಯಕ್ಷ ಸುರೇಶ ಹೂಗಾರ, ನಿರ್ದೇಶಕರಾದ ಎಂ.ಎಂ. ಹೂಗಾರ, ಅನಿಲ ಹೂಗಾರ, ಲಲಿತಾ ಹೂಗಾರ, ಪರವತ್ತಪ್ಪ ಹೂಗಾರ, ದೇವೇಂದ್ರ ಹೂಗಾರ ಪಾಲ್ಗೊಂಡಿದ್ದರು. ನಿರ್ದೇಶಕ ಬಸವರಾಜ ಹೂಗಾರ ನಿರೂಪಿಸಿದರು. ನಾಗರಾಜ ಸಂಗಳಕರ ವಂದಿಸಿದರು.