ವಿಜಯವಾಣಿ ಸುದ್ದಿಜಾಲ ಪಡುಬಿದ್ರಿ
ಎರ್ವಾಳು ಶ್ರೀ ಜನಾರ್ದನ ಕಂಬಳ ಸಮಿತಿ ಹಾಗೂ ಎರ್ವಾಳು ತೆಂಕ ಬಡಾ ಗ್ರಾಮಸ್ಥರ ಸಹಯೋಗದಲ್ಲಿ ನಡೆಯಲಿರುವ ಎರ್ವಾಳು ತೆಂಕ ಬಡಾ ಜೋಡುಕರೆ ಕಂಬಳದ ಕರೆ ನಿರ್ವಾಣಕ್ಕೆ ಎರ್ವಾಳು ಬಡಕೊಟ್ಟು ಬಾಕಿವಾರು ಗದ್ದೆಯಲ್ಲಿ ಬುಧವಾರ ಗುದ್ದಲಿಪೂಜೆ ನೆರವೇರಿಸಲಾಯಿತು.
ಬೆಳ್ಮಣ್ ವ್ನಿೇಶ್ ಭಟ್ ನೇತೃತ್ವದಲ್ಲಿ, ಎರ್ವಾಳು ಶ್ರೀ ಜನಾರ್ದನ ದೇವಸ್ಥಾನ ಪ್ರಧಾನ ಅರ್ಚಕ ಕೃಷ್ಣಮೂರ್ತಿ ಭಟ್, ಬಾಲಕೃಷ್ಣ ಭಟ್ ಸಹಕಾರದಲ್ಲಿ ಧಾರ್ಮಿಕ ವಿಧಿ ವಿಧಾನಗಳು ನಡೆದವು.
ಶಾಸಕರಾದ ಗುರ್ಮೆ ಸುರೇಶ್ ಶೆಟ್ಟಿ, ವಿ.ಸುನೀಲ್ ಕುವಾರ್ ಹಾಗೂ ರಾಜ್ಯ ಕಂಬಳ ಅಸೋಸಿಯೇಶನ್ ಅಧ್ಯಕ್ಷ ದೇವಿಪ್ರಸಾದ್ ಶೆಟ್ಟಿ ಬೆಳಪು ಕಂಬಳ ಲಾಂಛನ ಬಿಡುಗಡೆಗೊಳಿಸಿದರು.
ಎರ್ವಾಳು ತೆಂಕ ಬಡಾ ಜೋಡುಕರೆ ಕಂಬಳ ಸಮಿತಿ ಅಧ್ಯಕ್ಷ ಎರ್ವಾಳು ರೋಹಿತ್ ಹೆಗ್ಡೆ ವಾತನಾಡಿ, ಫೆ.28ರಂದು ಬಡಕೊಟ್ಟು ಬಾಕಿಮಾರು ಗದ್ದೆಯಲ್ಲಿ ಎರ್ವಾಳು ತೆಂಕ ಬಡಾ ಜೋಡುಕರೆ ಕಂಬಳಕ್ಕೆ ದಿನಾಂಕ ನಿಗದಿಯಾಗಿದೆ ಎಂದರು.
ದೇವಸ್ಥಾನ ಆಡಳಿತ ಮೊಕ್ತೇಸರ ಅಶೋಕ್ ರಾಜ್, ತೆಂಕ ಗ್ರಾಪಂ ಅಧ್ಯಕ್ಷೆ ಸುರೇಖಾ, ಉಪಾಧ್ಯಕ್ಷೆ ಕಸ್ತೂರಿ ಪ್ರವೀಣ್, ಉಚ್ಚಿಲ ಚರ್ಚ್ ಧರ್ಮಗುರು ಜಾನ್ ವಿ.ರ್ನಾಂಡಿಸ್, ಮಸೀದಿ ಧರ್ಮಗುರು ಶರೀಫ್, ಪ್ರಮುಖರಾದ ಚಂದ್ರಹಾಸ ಶೆಟ್ಟಿ, ಸುರೇಶ್ ಜಿ.ಶೆಟ್ಟಿ, ಸಂತೋಷ್ ಶೆಟ್ಟಿ, ಬಾಲಚಂದ್ರ ಶೆಟ್ಟಿ, ವಿಜಯ ಕುವಾರ್ ಕಂಗಿನಮನೆ, ಸುಕುವಾರ್ ಶೆಟ್ಟಿ, ಲೋಕೇಶ್ ಶೆಟ್ಟಿ, ಪಿ.ಆರ್.ಶೆಟ್ಟಿ, ಅರುಣ್ ಶೆಟ್ಟಿ, ರವಿ ಭಟ್ ವುಡ್‌ಲ್ಯಾಂಡ್ಸ್, ಅಶೋಕ್ ಶೆಟ್ಟಿ, ಅಮರನಾಥ್ ಶೆಟ್ಟಿ, ಸಂತೋಷ್ ಶೆಟ್ಟಿ, ನಕ್ರೆ ಅಂತೋನಿ ಡಿಸೋಜ, ಸದಾನಂದ ಶೆಟ್ಟಿ, ವೆಂಕಟೇಶ ನಾವಡ, ಜಗಜೀವನ್ ಚೌಟ, ಕಿಶೋರ್ ಶೆಟ್ಟಿ, ವೈ.ಶಶಿಧರ ಶೆಟ್ಟಿ, ಜಯರಾಜ್ ಎರ್ವಾಳು, ಶಿವಪ್ರಸಾದ್ ಶೆಟ್ಟಿ, ಸದಾನಂದ ನಾಯ್ಗರು, ನಿತ್ಯಾನಂದ ಶೆಟ್ಟಿ, ಯಶೋಧರ ಶೆಟ್ಟಿ, ಮನೋಜ್ ಶೆಟ್ಟಿ, ವಿನಯ ಶೆಟ್ಟಿ, ಗಣೇಶ್ ಶೆಟ್ಟಿ, ಯು.ಸಿ.ಶೇಕಬ್ಬ ಉಪಸ್ಥಿತರಿದ್ದರು.