ಜಿಲ್ಲೆ

ಕೆಸರಿನ ಕೆರೆಯಂತಾದ ರಸ್ತೆ

ಮಾಯಕೊಂಡ: ಮಾಯಕೊಂಡ ಸೇರಿ ಹೋಬಳಿಯ ಹುಚ್ಚವ್ವನಹಳ್ಳಿ, ಎಚ್. ಬಸವಾಪುರ, ಎಚ್. ವಡ್ಡರಹಟ್ಟಿ, ರಾಂಪುರ, ಹೆದ್ನೇ, ಕ್ಯಾತನಹಳ್ಳಿ ಹಾಗೂ ಹಲವಾರು ಗ್ರಾಮಗಳಲ್ಲಿ ಸೋಮವಾರ ಸಂಜೆ ಅರ್ಧ ಗಂಟೆಗೂ ಹೆಚ್ಚು ಅವಧಿ ಬಿರುಸಿನ ಮಳೆ ಸುರಿದಿದೆ.

ಹುಚ್ಚವ್ವನಹಳ್ಳಿ ಮೂಲಕ ಹೊಳಲ್ಕೆರೆ ತಾಲೂಕಿನ ಗಂಜಿಗಟ್ಟೆ, ಮುತ್ತಗದೂರು ಗ್ರಾಮವನ್ನು ಸಂರ್ಪಸುವ ಹಾಗೂ ನೂರಾರು ಎಕರೆ ಜಮೀನುಗಳಿಗೆ ನಿತ್ಯ ಓಡಾಡುವ ರಸ್ತೆಯಲ್ಲಿ ಮೊದಲೆ ಗುಂಡಿಗಳು ಬಿದ್ದಿದ್ದು, ಮಳೆಯಿಂದ ಕೆಸರಿನ ಕೆರೆಯಂತಾಗಿತ್ತು. ಇದರಿಂದ ಜಮೀನುಗಳಿಗೆ ಹೋಗಲು ರೈತರು ಪರದಾಡಿದರು.

ಹೋಬಳಿಯ ಜಮೀನುಗಳನ್ನು ಸಂರ್ಪಸುವ ರಸ್ತೆಗಳು ಸಂಪೂರ್ಣ ಹಾಳಾಗಿದ್ದು, ಮುಂಗಾರು ಬಿತ್ತನೆಗೆ ಬೀಜ ಹಾಗೂ ರಸಗೊಬ್ಬರಗಳನ್ನು ಟ್ರ್ಯಾಕ್ಟರ್ ಹಾಗೂ ಬೈಕ್​ನಲ್ಲಿ ಹೊಲಕ್ಕೆ ಸಾಗಿಸುವುದು ಕಷ್ಟಸಾಧ್ಯವಾಗಿದೆ. ರಸ್ತೆಗಳ ಅಭಿವೃದ್ಧಿಯತ್ತ ಸರ್ಕಾರ ಗಮನ ಹರಿಸರಿದ್ದರೆ ಮುಂದಿನ ದಿನಗಳಲ್ಲಿ ಹೋರಾಟ ಮಾಡಬೇಕಾಗುತ್ತದೆ ಎಂದು ಜಿಲ್ಲಾ ರೈತ ಮುಖಂಡ ಹುಚ್ಚವ್ವನಹಳ್ಳಿ ಗಣೇಶ್ ತಿಳಿಸಿದ್ದಾರೆ.