ಹುಬ್ಬಳ್ಳಿ: ಸೆಂಟ್ರಲ್ ವಿಧಾನಸಭಾ ಕ್ಷೇತ್ರದಲ್ಲಿ ಗುತ್ತಿಗೆದಾರರು ಒಳ್ಳೆಯ ಗುಣಮಟ್ಟದ ಕಾಮಗಾರಿ ಮಾಡಿ ನಿಗದಿತ ಅವಧಿಯೊಳಗೆ ರ್ಪೂಣಗೊಳಿಸಬೇಕೆಂದು ಶಾಸಕ ಮಹೇಶ ಟೆಂಗಿನಕಾಯಿ ಸೂಚಿಸಿದರು.
ಇಲ್ಲಿಯ ವಾರ್ಡ್ ನಂ. 35ರ ಶಾಂತಿನಿಕೇತನ ಕಾಲನಿಯಲ್ಲಿ ಒಳಚರಂಡಿ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿ ಅವರು ಮಾತನಾಡಿದರು.
ಶಾಂತಿನಿಕೇತನ ಕಾಲನಿಯ ಉದ್ಯಾನವನ, ಸಮುದಾಯ ಭವನ, ಕುಡಿಯುವ ನೀರು ಸಮಸ್ಯೆ ನಿವಾರಣೆ ಮಾಡಬೇಕು. ಮನೆ ಕಳ್ಳತನ ಪ್ರಕರಣ ಹೆಚ್ಚುತ್ತಿದ್ದು, ಕಡಿವಾಣ ಹಾಕಬೇಕು ಎಂದು ಬಡಾವಣೆಯ ನಾಗರಿಕರು, ಮಹಿಳಾ ಮಂಡಳದ ಸದಸ್ಯರು ಮನವಿ ಸಲ್ಲಿಸಿದರು.
ಸಾರ್ವಜನಿಕರ ಮನವಿ ಸ್ವೀಕರಿಸಿದ ಶಾಸಕರು, ಸಂಬಂಧಪಟ್ಟ ಇಲಾಖೆ ಅಧಿಕಾರಿಗಳಿಗೆ ಫೋನ್ ಮೂಲಕ ತಕ್ಷಣ ತಿಳಿಸಿ ಬಡಾವಣೆ ಸಮಸ್ಯೆಗಳನ್ನು ಪರಿಹರಿಸಲು ಸೂಚಿಸಿದರು.
ಮಹಾನಗರ ಪಾಲಿಕೆಯ ಹಣಕಾಸು ಸ್ಥಾಯಿ ಸಮಿತಿ ಅಧ್ಯಕ್ಷ ಮಲ್ಲಿಕಾರ್ಜುನ ಗುಂಡೂರು, ಪ್ರಮುಖರಾದ ಎಂ.ಎಂ. ಮಳಗಿ, ವಿಜಯ ಶೆಟ್ಟಿ, ಗಜಾನನ ಕಾಮತ್, ನಾಗೇಶ ಮಾನೆ, ವಾರ್ಡ್ ಅಧ್ಯಕ್ಷ ಮುತ್ತು ಹೆಬ್ಬಳ್ಳಿ, ನಿವಾಸಿಗಳು ಉಪಸ್ಥಿತರಿದ್ದರು.