ಜಿಲ್ಲೆ

ಹುಬ್ಬಳ್ಳಿ-ವಿಜಯವಾಡ ರೈಲು ಸಂಚಾರ ರದ್ದು

ಆನಂದಕುಮಾರ ಅಂಗಡಿ

ಹುಬ್ಬಳ್ಳಿ : ಗುಂಟೂರು ವಿಭಾಗದ ವ್ಯಾಪ್ತಿಯಲ್ಲಿ ರೈಲ್ವೆ ಸುರಕ್ಷತೆಗೆ ಸಂಬಂಧಿಸಿದ ನಿರ್ವಹಣಾ ಕಾಮಗಾರಿ ಕೈಗೊಂಡ ಪರಿಣಾಮವಾಗಿ ಹುಬ್ಬಳ್ಳಿ ಮತ್ತು ವಿಜಯವಾಡ ನಿಲ್ದಾಣಗಳ ಮಧ್ಯೆ ಪ್ರತಿ ದಿನ ಸಂಚರಿಸುವ ಎಕ್ಸ್​ಪ್ರೆಸ್ ರೈಲುಗಳ ಸಂಚಾರವನ್ನು ಮೇ 16ರಿಂದ ತಾತ್ಕಾಲಿಕವಾಗಿ ರದ್ದುಗೊಳಿಸಲಾಗಿದೆ.

ಎಸ್​ಎಸ್​ಎಸ್ ಹುಬ್ಬಳ್ಳಿ-ವಿಜಯವಾಡ ಡೈಲಿ ಎಕ್ಸ್​ಪ್ರೆಸ್ ರೈಲು ಸಂಚಾರ ಮೇ 16 ರಿಂದ 31ರವರೆಗೆ ಹಾಗೂ ವಿಜಯವಾಡ - ಎಸ್​ಎಸ್​ಎಸ್ ಹುಬ್ಬಳ್ಳಿ ಡೈಲಿ ಎಕ್ಸ್​ಪ್ರೆಸ್ ರೈಲು ಸಂಚಾರ ಮೇ 17 ರಿಂದ ಜೂನ್ 1ರವರೆಗೆ ರದ್ದುಗೊಳಿಸಲಾಗಿದೆ.