ಜಿಲ್ಲೆ

ಕಟ್ಟಡ ಸಾಮಗ್ರಿ ಕದ್ದು ಪರಾರಿಯಾಗುತ್ತಿದ್ದ ಆರೋಪಿತರ ಬಂಧನ

ಹುಬ್ಬಳ್ಳಿ: ಕಟ್ಟಡ ಸಾಮಗ್ರಿಗಳನ್ನು ಕದ್ದು ಪರಾರಿಯಾಗುತ್ತಿದ್ದ ಐವರು ಆರೋಪಿಗಳನ್ನು ಹುಬ್ಬಳ್ಳಿ ಗ್ರಾಮೀಣ ಠಾಣೆ ಪೊಲೀಸರು ಭಾನುವಾರ ಹುಬ್ಬಳ್ಳಿ ತಾಲೂಕಿನ ಶೆರೇವಾಡ ಟೋಲ್​ ಬಳಿ ಬಂಧಿಸಿದ್ದಾರೆ. ಆರೋಪಿತರಿಂದ ಗೂಡ್ಸ್​ ವಾಹನ ಹಾಗೂ 72 ಸಾವಿರ ರೂ. ಮೌಲ್ಯದ ಕಬ್ಬಿಣದ ಪ್ಲೇಟ್​ಗಳನ್ನು ವಶಪಡಿಸಿಕೊಂಡಿದ್ದಾರೆ. ಪಿಎಸ್​ಐ ಪ್ರಸಾದ ಪಣೀಕರ, ಸಿಬ್ಬಂದಿ ಮಹಾಂತೇಶ ನಾಗನಗೌಡ, ನಿಂಗರಾಜ ಕರ್ಜಗಿ, ಇತರರಿದ್ದರು.