ಹುಬ್ಬಳ್ಳಿ: ಇಲ್ಲಿಯ ಗೋಪನಕೊಪ್ಪದಲ್ಲಿ ರಾಮಭಕ್ತರು ಶುಕ್ರವಾರ ಶ್ರೀರಾಮೋತ್ಸವ ಹಾಗೂ ಕರಸೇವಕರ ಸನ್ಮಾನ ಕಾರ್ಯಕ್ರಮ ಏರ್ಪಡಿಸಿದ್ದರು.
ಧಾರವಾಡ ರಾಮಕೃಷ್ಣ ಆಶ್ರಮದ ಶ್ರೀ ವಿಜಯಾನಂದ ಸರಸ್ವತಿ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು.
ಅತಿಥಿಯಾಗಿದ್ದ ಮಾಜಿ ಶಾಸಕ ಅಶೋಕ ಕಾಟವೆ, ಧನ್ಯೋಸ್ಮಿ ಯೋಗ ಕೇಂದ್ರ ಅಧ್ಯಕ್ಷ ವಿನಾಯಕ ತಲಗೇರಿ, ನಿರಾಮಯ ಫೌಂಡೇಷನ್ ಸಂಸ್ಥಾಪಕ ಡಾ. ಮಲ್ಲಿಕಾರ್ಜುನ ಬಾಳಿಕಾಯಿ, ವಿಎಕೆ ಫೌಂಡೇಷನ್ ಸಂಸ್ಥಾಪಕ ವೆಂಕಟೇಶ್ ಕಾಟವೆ, ಪಾಲಿಕೆ ಸದಸ್ಯರಾದ ಎಂ.ವೈ. ನರಗುಂದ, ಮುಖಂಡರಾದ ದೇವರಾಜ ದಾಡಿಬಾವಿ, ಪ್ರಗತಿಪರ ರೈತರಾದ ಸಿದ್ಧನಗೌಡ ಪಾಟೀಲ, ದೇವೇಂದ್ರಪ್ಪ ಹಳ್ಯಾಳ, ರಾಯಪ್ಪ ಜಟ್ಟಪ್ಪನವರ ಉಪಸ್ಥಿತರಿದ್ದರು.
ಕರಸೇವೆಯ ನೇತೃತ್ವ ವಹಿಸಿದ್ದ ಮಾಜಿ ಶಾಸಕ ಅಶೋಕ ಕಾಟವೆ, ಹಿರಿಯರಾದ ರಂಗಾ ಬದ್ದಿ, ರಾಮಚಂದ್ರ ಕಲ್ಬುಗಿರ್, ಶ್ರೀಕಾಂತ ಪೂಜಾರಿ, ಗುರುಸಿದ್ದ ಶೆಲ್ಲಿಕೇರಿ, ನಾರಾಯಣ ಕಾಟವೆ, ವಿನಾಯಕ ಸಫಾರೆ, ಬಾಲಕೃಷ್ಣ ಜಿತೂರಿ, ರಾಘವೇಂದ್ರ ಕಠಾರೆ, ಉಮಾಕಾಂತ ಪವಾರ, ಶ್ರೀನಿವಾಸ ಪವಾರ, ದಿಲೀಪ್ ಶಾಲಗರ, ರಮೇಶ ಕಾಟವೆ ಅವರನ್ನು ಪ್ರಭು ಶ್ರೀರಾಮನ ನೆನಪಿನ ಕಾಣಿಕೆ ನೀಡಿ ಗೌರವಿಸಲಾಯಿತು.