ಹುಬ್ಬಳ್ಳಿ : ಎಸ್ಎಸ್ಎಸ್ ಹುಬ್ಬಳ್ಳಿ- ರಾಮನಾಥಪುರಂ- ಎಸ್ಎಸ್ಎಸ್ ಹುಬ್ಬಳ್ಳಿ ಸಾಪ್ತಾಹಿಕ ವಿಶೇಷ ಎಕ್ಸ್ಪ್ರೆಸ್ ರೈಲುಗಳ ಸಂಚಾರದ ಅವಧಿ ವಿಸ್ತರಿಸಲು ರೈಲ್ವೆ ಮಂಡಳಿ ಅನುಮೋದನೆ ನೀಡಿದೆ.
ಎಸ್ಎಸ್ಎಸ್ ಹುಬ್ಬಳ್ಳಿ- ರಾಮನಾಥಪುರಂ ಸಾಪ್ತಾಹಿಕ ವಿಶೇಷ ಎಕ್ಸ್ಪ್ರೆಸ್ ರೈಲು ಈ ಮೊದಲು ಅ. 25ರವರೆಗೆ ಸಂಚಾರ ನಡೆಸಲು ಸೂಚಿಸಲಾಗಿತ್ತು. ಇದೀಗ ಈ ರೈಲು ನ. 1 ರಿಂದ 29 ರವರೆಗೆ ತನ್ನ ಸೇವೆಯನ್ನು ಪ್ರತಿ ಶನಿವಾರದಂದು ಐದು ಟ್ರಿಪ್ ಸಂಚಾರ ನಡೆಸಲಿದೆ.
ಅದೇ ರೀತಿ, ರಾಮನಾಥಪುರಂ -ಎಸ್ಎಸ್ಎಸ್ ಹುಬ್ಬಳ್ಳಿ ಸಾಪ್ತಾಹಿಕ ವಿಶೇಷ ಎಕ್ಸ್ಪ್ರೆಸ್ ರೈಲು ಅ.26 ರವರೆಗೆ ಸಂಚಾರ ನಡೆಸಲು ಸೂಚಿಸಲಾಗಿತ್ತು. ಈಗ, ನ. 2 ರಿಂದ 30 ರವರೆಗೆ ಪ್ರತಿ ಭಾನುವಾರದಂದು ಐದು ಟ್ರಿಪ್ ಸಂಚಾರ ನಡೆಸಲಿದೆ.
ಈಗಿರುವ ಸಂಯೋಜನೆ, ಸಮಯ ಮತ್ತು ನಿಲುಗಡೆಗಳೊಂದಿಗೆ ಈ ರೈಲುಗಳ ಸಂಚಾರ ಮುಂದುವರೆಯಲಿದೆ.