ಜಿಲ್ಲೆ

ಹುಬ್ಬಳ್ಳಿಯಲ್ಲಿ ಮುಂಗಾರು ಮಳೆಯ ಅನುಭವ

Dharwada - Basavaraj Idli

ಹುಬ್ಬಳ್ಳಿ: ಮುಂಗಾರು ಆರಂಭವಾಗಿ ಒಂದು ತಿಂಗಳು ಕಳೆದ ನಂತರ ಮಳೆಯ ಅನುಭವ ನೀಡುತ್ತಿದೆ. ಜೂನ್ ಇಡೀ ತಿಂಗಳು ಮಳೆ ಇಲ್ಲದೇ ಒಣ ಹವೆ ಮುಂದುವರಿದಿತ್ತು.

ಜುಲೈ ಮೊದಲ ವಾರ ಒಂದಿಷ್ಟು ಮಳೆಯ ದರ್ಶನವಾಗುತ್ತಿದೆ. ಭಾನುವಾರ ರಜಾ ದಿನವಾಗಿದ್ದರಿಂದ ನಗರದ ಪ್ರದೇಶದಲ್ಲಿ ಜನರು ಹೊರಗಡೆ ಹೋಗಲು ಪರದಾಡಿದರು. ಕೆಲವರು ಮಳೆಯಲ್ಲಿಯೇ ನನೆಯುತ್ತ ಸಾಗಿದರು.

ಗ್ರಾಮೀಣ ಭಾಗದಲ್ಲಿ ಮಳೆಯ ನಿರೀೆಯಲ್ಲಿದ್ದ ರೈತರಿಗೆ ಜಿಟಿಜಿಟಿ ಮಳೆ ಹೊಸ ಆಶಯ ಮೂಡಿಸಿದೆ. ಮುಂಗಾರು ಬಿತ್ತನೆ ಸಂದರ್ಭದಲ್ಲಿ ಆಗದ ಮಳೆ ಈಗಲಾದರೂ ಸುರಿಯುತ್ತಿದೆಯಲ್ಲ ಎಂದು ನಿಟ್ಟುಸಿರು ಬಿಟ್ಟಿದ್ದಾರೆ.

ಬಿತ್ತನೆ ಪೂರ್ಣ ಪ್ರಮಾಣದಲ್ಲಿ ಆಗಿಲ್ಲ. ಇದೇ ರೀತಿ ಇನ್ನಷ್ಟು ಮಳೆಯಾದರೆ ಪರ್ಯಾಯ ಬೆಳೆಗಳ ಬಗ್ಗೆ ರೈತರು ಆಲೋಚನೆ ಮಾಡಬಹುದಾಗಿದೆ ಎಂದು ಹೇಳಲಾಗುತ್ತಿದೆ.