ಜಿಲ್ಲೆ

ಹುಬ್ಬಳ್ಳಿ-ಪಂಢರಪುರ ರೈಲು

ಆನಂದಕುಮಾರ ಅಂಗಡಿ

ಹುಬ್ಬಳ್ಳಿ : ಕಾರ್ತಿಕ ಏಕಾದಶಿ ಆಚರಣೆ ಹಿನ್ನೆಲೆಯಲ್ಲಿ ಭಕ್ತರ ಅನುಕೂಲಕ್ಕಾಗಿ ಹುಬ್ಬಳ್ಳಿ-ಪಂಢರಪುರ ಮಧ್ಯೆ ಆರು ಟ್ರಿಪ್ ವಿಶೇಷ ರೈಲು ಸಂಚಾರ ಆರಂಭಿಸಲಾಗಿದೆ.

ಎಸ್​ಎಸ್​ಎಸ್ ಹುಬ್ಬಳ್ಳಿ-ಪಂಢರಪುರ ಕಾಯ್ದಿರಿಸಿದ ವಿಶೇಷ ರೈಲು ನ. 9 ರಿಂದ 15ರವರೆಗೆ (ನ. 13 ಹೊರತುಪಡಿಸಿ) ನಿತ್ಯ ರಾತ್ರಿ 7.45 ಕ್ಕೆ ಹೊರಟು, ಮಾರನೇ ದಿನ ಬೆಳಗಿನಜಾವ 4.30ಕ್ಕೆ ಪಂಢರಪುರ ತಲುಪಲಿದೆ.

ಪಂಢರಪುರ-ಎಸ್​ಎಸ್​ಎಸ್ ಹುಬ್ಬಳ್ಳಿ ಕಾಯ್ದಿರಿಸಿದ ವಿಶೇಷ ರೈಲು ನ. 10 ರಿಂದ 16ರವರೆಗೆ (ನ. 14 ಹೊರತುಪಡಿಸಿ) ನಿತ್ಯ ಬೆಳಗ್ಗೆ 6 ಗಂಟೆಗೆ ಪಂಢರಪುರದಿಂದ ಹೊರಟು ಅದೇ ದಿನ ಸಂಜೆ 4.30ಕ್ಕೆ ಎಸ್​ಎಸ್​ಎಸ್ ಹುಬ್ಬಳ್ಳಿ ನಿಲ್ದಾಣಕ್ಕೆ ಆಗಮಿಸಲಿದೆ.

ಎರಡೂ ಮಾರ್ಗಗಳಲ್ಲಿ ಈ ರೈಲು ಧಾರವಾಡ, ಅಳ್ನಾವರ, ಲೋಂಡಾ, ಖಾನಾಪುರ, ದೇಸೂರು, ಬೆಳಗಾವಿ, ಪಚ್ಚಾಪುರ, ಗೋಕಾಕ ರೋಡ್, ಘಟಪ್ರಭಾ, ಚಿಕ್ಕೋಡಿ ರೋಡ್, ರಾಯಬಾಗ, ಚಿಂಚಲಿ, ಕುಡಚಿ, ಉಗಾರ ಖುರ್ದ, ಶೇಡಬಾಳ, ವಿಜಯನಗರ, ಮೀರಜ್, ಸುಲ್ಗರೆ, ಕವಠೆಮಹಾಂಕಾಲ್, ಧಲಗಾಂವ್, ಜತ್ ರೋಡ್ ಮತ್ತು ಸಂಗೋಳ ನಿಲ್ದಾಣಗಳಲ್ಲಿ ನಿಲುಗಡೆಗೊಳ್ಳಲಿದೆ.