ಜಿಲ್ಲೆ

ನವನಗರದಲ್ಲಿ ಸುಸಜ್ಜಿತ ಮಾರ್ಕೆಟ್,ಇನ್ನೂರಕ್ಕೂ ಹೆಚ್ಚು ವರ್ತಕರಿಗೆ ಅವಕಾಶ

Dharwada - Basavaraj Idli

ಹುಬ್ಬಳ್ಳಿ: ಇಲ್ಲಿಯ ನವನಗರದ ಮಧ್ಯಭಾಗದಲ್ಲಿ ತಲೆ ಎತ್ತಿರುವ ಸುಸಜ್ಜಿತ, ಆಧುನಿಕ ಮಾರುಕಟ್ಟೆಯು ಲೋಕಾರ್ಪಣೆಗೆ ಸಜ್ಜುಗೊಂಡಿದೆ.

ನವನಗರ ಬಡಾವಣೆ ನಿರ್ಮಾಣವಾಗಿ ಮೂರು ದಶಕದ ನಂತರ ಇದೀಗ ಹೈಟೆಕ್ ಮಾದರಿಯ ತರಕಾರಿ ಹಾಗೂ ಅಗತ್ಯ ವಸ್ತುಗಳ ಮಾರುಕಟ್ಟೆಯನ್ನು ಇಲ್ಲಿ ನಿಮಿರ್ಸಲಾಗಿದೆ.

ನವನಗರ ಹಾಗೂ ಸುತ್ತಮುತ್ತಲಿನ ಹೊಸ ಬಡಾವಣೆಗಳಿಗೆ ಇದೇ ಪ್ರಮುಖ ಮಾರುಕಟ್ಟೆಯಾಗಿದೆ. ಸುತ್ತಲಿನ ಗ್ರಾಮಗಳ ರೈತರು ಸಹ ಇಲ್ಲಿಯೇ ತಮ್ಮ ಉತ್ಪನ್ನಗಳು ತಂದು ವ್ಯಾಪಾರ ಮಾಡುತ್ತಾರೆ.

ಈ ಮೊದಲು ನಿಮಿರ್ಸಲಾಗಿದ್ದ 40 ಕಟ್ಟೆಗಳಿದ್ದ ಮಾರುಕಟ್ಟೆ ಬಳಕೆಯಾಗದೇ ಗುಜರಿ ವಸ್ತುಗಳ ತಾಣವಾಗಿತ್ತು. ಅದರ ಸುತ್ತಮುತ್ತಲಿನ ಜಾಗವೂ ಅನಧಿಕೃತವಾಗಿ ಬಳಕೆಯಾಗುತ್ತಿತ್ತು. ಇದರಿಂದ ಕೊಳಚೆ ಪ್ರದೇಶವಾಗಿ ಮಾರ್ಪಟ್ಟಿತ್ತು.

ಪಾಲಿಕೆ ಸದಸ್ಯೆ ಸುನಿತಾ ಮಾಳವದಕರ ಅವರು ವಿಶೇಷ ಕಾಳಜಿ ವಹಿಸಿ, ಕೇಂದ್ರ ಸಚಿವರು ಹಾಗೂ ಶಾಸಕರ ಸಹಕಾರದೊಂದಿಗೆ ಸುವ್ಯವಸ್ಥಿತ ಮಾರುಕಟ್ಟೆ ನಿರ್ಮಿಸುವಲ್ಲಿ ಸಫಲರಾಗಿದ್ದಾರೆ.

ಒಂದು ಎಕರೆಯಷ್ಟು ಜಾಗದಲ್ಲಿ ಇದೀಗ ಸುಸಜ್ಜಿತ ಮಾರುಕಟ್ಟೆಯನ್ನು ಶಾಸಕರು ಹಾಗೂ ಮಹಾನಗರ ಪಾಲಿಕೆ ಅನುದಾನ ಸೇರಿ ಒಟ್ಟು 1.50 ಕೋಟಿ ರೂ. ವೆಚ್ಚದಲ್ಲಿ ಅಭಿವೃದ್ಧಿಪಡಿಸಲಾಗಿದೆ.

ಹಳೇಕಟ್ಟಡ, ಹೊಸ ಕಟ್ಟಡ, ಫುಡ್ ಝೊನ್, ನಾನ್ವೆಜ್ ಝೊನ್ ಹೀಗೆ ಪ್ರತ್ಯೇಕ ವ್ಯವಸ್ಥೆ ಮಾಡಲಾಗಿದೆ. ಅಲ್ಲದೇ ವಾಕಿಂಗ್ ಪಾಥ್, ಪಾಕಿರ್ಂಗ್ ಜಾಗ ಬಿಡಲಾಗಿದೆ. ಪಕ್ಕದಲ್ಲಿ ಶೌಚಗೃಹದ ವ್ಯವಸ್ಥೆ ಇದೆ. ಆಕರ್ಷಕ ವಿದ್ಯುತ್ ದೀಪಗಳ ವ್ಯವಸ್ಥೆ ಮಾಡಲಾಗಿದೆ. ಡಿಜಿಟಲ್ ಫಲಕಗಳನ್ನು ಅಳವಡಿಸಲಾಗಿದೆ.

ಈಗಾಗಲೇ ಮಹಾನಗರ ಪಾಲಿಕೆಯಿಂದ ಗುರುತಿನ ಪತ್ರ ನೀಡಲಾಗಿದ್ದು, ಅವರಿಗೆ ಜಾಗ ನೀಡಲಾಗುತ್ತದೆ. ಸಂಜೆ ಮಾತ್ರ ಬಂದು ವ್ಯಾಪಾರ ಮಾಡುವ ರೈತರು, ವರ್ತಕರಿಗೂ ಅವಕಾಶ ನೀಡಲಾಗುತ್ತಿದೆ.

ಮಾರುಕಟ್ಟೆ ಸ್ವಚ್ಛಗೊಳಿಸುವ ಪೌರಕಾಮಿರ್ಕರಿಗೆ ವಿಶ್ರಾಂತಿ ಕೊಠಡಿ, ಕಸ ಸಂಗ್ರಹಣೆಗೆ ಡಸ್ಟ್ಬಿನ್, ಕುಡಿಯುವ ನೀರಿನ ವ್ಯವಸ್ಥೆ, ಸೂಚನಾ ಫಲಕಗಳು, ಸುಂದರ ಗೋಡೆ ಚಿತ್ರಗಳು ಮಾರುಕಟ್ಟೆಯ ವಿಶೇಷತೆಗಳಾಗಿವೆ.

ಪ್ಲಾಸ್ಟಿಕ್ ಮುಕ್ತ:
ನವನಗರ ಮಾರುಕಟ್ಟೆಯ ಮತ್ತೊಂದು ವಿಶೇಷತೆ ಎಂದರೆ ಇದು ಪ್ಲಾಸ್ಟಿಕ್ ಮುಕ್ತವಾಗಿರಲಿದೆ. ಒಂದು ವೇಳೆ ನಿಷೇಧಿತ ಪ್ಲಾಸ್ಟಿಕ್ ಬಳಕೆ ಮಾಡಿದರೆ ನಿರ್ದಾಣ್ಯವಾಗಿ ದಂಡ ವಿಧಿಸಲಾಗುತ್ತದೆ. ಎಲ್ಲೆಂದರಲ್ಲಿ ಉಗುಳುವವರು, ಕಸ ಚೆಲ್ಲವವರ ವಿರುದ್ಧವು ಕ್ರಮ ಕೈಗೊಳ್ಳಲಾಗುತ್ತದೆ. ಇದಕ್ಕಾಗಿ ನಿರಂತರ ನಿಗಾ ವಹಿಸಲಾಗುತ್ತದೆ ಎಂದು ಪಾಲಿಕೆ ಸಹಾಯಕ ಆಯುಕ್ತ ರಮೇಶ ನೂಲ್ವಿ ಹೇಳುತ್ತಾರೆ.

ಉದ್ಘಾಟನೆ: ನವನಗರದ ತರಕಾರಿ ಮಾರುಕಟ್ಟೆಯನ್ನು ಜ. 20ರಂದು ಸಂಜೆ 7ಕ್ಕೆ ಕೇಂದ್ರ ಸಚಿವ ಪ್ರಲ್ಹಾದ ಜೋಶಿ, ಶಾಸಕ ಅರವಿಂದ ಬೆಲ್ಲದ ಅವರು ಉದ್ಘಾಟಿಸುವರು. ಪಾಲಿಕೆ ಸದಸ್ಯೆ ಸುನೀತಾ ಮಾಳವದಕರ ಅಧ್ಯಕ್ಷತೆ ವಹಿಸುವರು.