ಜಿಲ್ಲೆ

ಹುಬ್ಬಳ್ಳಿ-ಜೋಧಪುರ ವಾರದಲ್ಲಿ 2 ಬಾರಿ ಸಂಚರಿಸಲಿ

ವಿಜಯವಾಣಿ ಸುದ್ದಿಜಾಲ ಹುಬ್ಬಳ್ಳಿ:

ಹುಬ್ಬಳ್ಳಿ-ಜೋಧಪುರ-ಹುಬ್ಬಳ್ಳಿ ವೀಕ್ಲಿ ವಿಶೇಷ ರೈಲು ವಾರದಲ್ಲಿ 2 ಬಾರಿ ಓಡಿಸುವ ವ್ಯವಸ್ಥೆ ಕಲ್ಪಿಸಬೇಕು ಎಂದು ಹುಬ್ಬಳ್ಳಿ ರಾಜಸ್ಥಾನಿ ಸಮಾಜ ಆಗ್ರಹಿಸಿದೆ.</p><p>ಸಮಾಜದ ಪ್ರಮುಖರು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಸಮ್ಮುಖದಲ್ಲಿ ಶುಕ್ರವಾರ ಹುಬ್ಬಳ್ಳಿಯಲ್ಲಿ ನೈಋತ್ಯ ರೈಲ್ವೆ ಪ್ರಧಾನ ವ್ಯವಸ್ಥಾಪಕರಿಗೆ ಮನವಿ ಸಲ್ಲಿಸಿದರು.

ಹುಬ್ಬಳ್ಳಿಯಿಂದ ಜೋಧಪುರಕ್ಕೆ ವಾರಕ್ಕೊಮ್ಮೆ ರೈಲು ಸಂಚಾರ ಸೌಲಭ್ಯ ಕಲ್ಪಿಸಿರುವುದಕ್ಕೆ ರೈಲ್ವೆ ಸಚಿವ ಅಶ್ವಿನಿ ವೈಷ್ಣವ ಹಾಗೂ ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಅಭಿನಂದನಾರ್ಹರು. ಅದೇ ರೀತಿ ಈ ರೈಲು ವಾರಕ್ಕೆ 2 ಬಾರಿ ಸಂಚರಿಸುವ ವ್ಯವಸ್ಥೆ ಮಾಡಬೇಕು ಹಾಗೂ ಇದಕ್ಕೆ 6-8 ಸ್ಲೀಪರ್ ಬೋಗಿಗಳನ್ನು ಅಳವಡಿಸಬೇಕು. ಈ ವಿಶೇಷ ರೈಲನ್ನು ಕಾಯಂ ರೈಲಾಗಿ ಪರಿವರ್ತಿಸಬೇಕು ಎಂದು ಬೇಡಿಕೆ ಮಂಡಿಸಿದ್ದಾರೆ.

ಹುಬ್ಬಳ್ಳಿ, ಬೆಳಗಾವಿ ಮತ್ತು ಮೀರಜನಿಂದ ರಾಜಸ್ಥಾನದ ಜಳೋರ, ಸಮದರಿ ಹಾಗೂ ಮೊಕಳಾಸರಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಜನರು ಪ್ರಯಾಣಿಸುತ್ತಾರೆ. ಹಾಗಾಗಿ ಹುಬ್ಬಳ್ಳಿಯಿಂದ ಬರ್ವರ, ಬಿಕಾನೇರ (ಮಾರ್ಗ-ಜಳೋರ, ಸಮದರಿ, ಮೊಕಳಾಸರ) ಗೆ ಬೈ ವೀಕ್ಲಿ ರೈಲು ಸಂಚಾರ ಸೌಲಭ್ಯ ಕಲ್ಪಿಸಬೇಕೆಂದು ಆಗ್ರಹಿಸಿದ್ದಾರೆ.

ಸುಭಾಸಸಿಂಗ ಜಮಾದಾರ, ದೂದಾಬಾಯಿ ಚೌಧರಿ, ಅಮೃತಲಾಲ ಜೈನ, ಅಭಿಷೇಕ ಮೆಹ್ತಾ, ಕಿಶೋರ ಪಟೇಲ್, ಬಾಬುಲಾಲ್ ಶಿರವಿ, ಮಾಲಾರಾಮ ದೇವಾಶಿ, ಉತ್ತಮ ಸಾಟಿಯಾ, ಇತರರು ಇದ್ದರು.