ಹುಬ್ಬಳ್ಳಿ: ಹುಬ್ಬಳ್ಳಿ ವಕೀಲರ ಸಂಘದ ಪದಾಧಿಕಾರಿಗಳು ಮತ್ತು ಆಡಳಿತ ಮಂಡಳಿ ಸದಸ್ಯರ ಸ್ಥಾನದ ಆಯ್ಕೆಗೆ ಜು.21ರಂದು ಚುನಾವಣೆ ನಡೆಯಲಿದ್ದು, ಒಟ್ಟು 46 ವಕೀಲರು ಕಣದಲ್ಲಿದ್ದಾರೆ. ಅಧ್ಯಕ್ಷ ಸ್ಥಾನಕ್ಕೆ ಏಳು ವಕೀಲರು ಸ್ಪರ್ಧಿಸಿದ್ದು, ತುರುಸಿನ ಪೈಪೋಟಿ ಏರ್ಪಟ್ಟಿದೆ.
ಅಧ್ಯಕ್ಷ ಸ್ಥಾನಕ್ಕೆ ಹಾಲಿ ಅಧ್ಯಕ್ಷ ಸಿ.ಆರ್. ಪಾಟೀಲ, ಮಾಜಿ ಅಧ್ಯಕ್ಷ ಡಿ.ಎಂ. ನರಗುಂದ, ಎಸ್.ಕೆ. ಕಾಯಕಮಠ, ಎಂ.ಎಸ್. ಬಾಣದ, ಸಿ.ಬಿ. ಪಾಟೀಲ, ಎಸ್.ಜೆ. ನಿರ್ಮಾಣಿಕ, ಎಚ್.ಎಲ್. ನದಾಫ್ ಸ್ಪರ್ಧೆಗಿಳಿದಿದ್ದಾರೆ.
ಪ್ರಧಾನ ಕಾರ್ಯದರ್ಶಿ ಸ್ಥಾನಕ್ಕೆ ಎಚ್.ಎಸ್. ಶಿಗ್ಗಾಂವ ಮತ್ತು ಪಿ.ಎಚ್. ತೋಟದ ಮಧ್ಯೆ ಸೆಣಸಾಟವಿದ್ದು, ಕಳೆದ ಬಾರಿ ಅಲ್ಪ ಮತಗಳ ಅಂತರದಲ್ಲಿ ಶಿಗ್ಗಾಂವ ಸೋತಿದ್ದರು.
ಉಪಾಧ್ಯಕ್ಷ ಸ್ಥಾನಕ್ಕೆ ಚತುಷ್ಕೋನ ಸ್ಪರ್ಧೆ ಇದೆ. ಎ.ಕೆ. ಅಕ್ಕಿ, ಎಲ್.ಕೆ. ಬೀಳಗಿ, ಎಸ್.ಎಂ. ಪಾಟೀಲ, ಜೆಡ್.ಕೆ. ತಟಗಾರ ಸ್ಪರ್ಧಿಸಿದ್ದಾರೆ. ಜಂಟಿ ಕಾರ್ಯದರ್ಶಿ ಸ್ಥಾನಕ್ಕೆ ಎಂ.ಎಚ್. ಜಕಾತಿ, ಜಿ.ಡಿ. ಜಂತ್ಲಿ, ಎಸ್.ಎಂ. ಕಲಬುರ್ಗಿ, ಎಸ್.ಕೆ. ಕೊಂಡೋಜಿ, ಆರ್.ಎನ್. ಮುಳಗುಂದಮಠ, ಖಜಾಂಚಿ ಸ್ಥಾನಕ್ಕೆ ಎಸ್.ಜಿ. ದೊಡ್ಡಮನಿ ಮತ್ತು ಎಸ್.ವಿ. ಗುಳೇದ ಕಣದಲ್ಲಿದ್ದಾರೆ.
ಆಡಳಿತ ಮಂಡಳಿಯ( ಹಿರಿಯರು) 3 ಸ್ಥಾನಗಳಿಗೆ ಎಸ್.ವೈ. ಬೆನಕಣ್ಣವರ, ಆರ್.ಎಸ್. ಗುಂಜಾಳ, ಐ.ಬಿ. ಹೊಳಗಣ್ಣವರ, ಜೆ.ಪಿ. ಕೋಕರೆ, ಎಸ್.ಎಚ್. ಕೂಡಲ, ಎಂ.ಎಲ್. ಲಾಡಖಾನ, ಎಸ್.ಕೆ. ಮುಲ್ಲಾ, ಆರ್.ಎಸ್. ಪಾಗದ, ಎಲ್.ಎಸ್. ಪಾಟೀಲ, ಎಸ್.ಕೆ. ಪಾಟೀಲ, ಸವಿತಾ ಪಾಟೀಲ, ಎಂ.ಬಿ. ರೋಣದ, ಶಿವಕುಮಾರ ಕೆ.ಬಿ. ಆಕಾಂಕ್ಷಿಗಳಾಗಿದ್ದಾರೆ.
ಕಿರಿಯರ ವಿಭಾಗದ ಮೂರು ಸ್ಥಾನಗಳಿಗೆ ಎಸ್.ಎಂ. ದೊಡ್ಡಮನಿ, ವಿ.ಎಸ್. ಹಳೇಮನಿ, ಎಂ.ಎನ್. ಇಬ್ರಾಹಿಂಪುರ, ರಾಮಕೃಷ್ಣ ಕಠಾರೆ, ಮಧು ಕೋಳಂಬೆ, ವಿವೇಕಾನಂದ ಕೂಬಿಹಾಳ, ಎಚ್.ಎಸ್. ಪಟ್ಟಣಶೆಟ್ಟರ್, ಎ.ವೈ. ರೋಣದ, ಎಂ.ಬಿ. ವಗ್ಗರ ಸ್ಪರ್ಧಿಗಳಾಗಿದ್ದಾರೆ. ಮಹಿಳೆಯರ ಹಿರಿಯರ ವಿಭಾಗದಲ್ಲಿ ಕೆ.ಟಿ. ಹಣಗಿ (ಕಾಂಚನಾ), ಉಮಾ ಹಂಡಿ, ಕಿರಿಯರ ವಿಭಾಗದಲ್ಲಿ ಗೀತಾ ಕಟಗಿಮಠ, ಶಿಲ್ಪಶ್ರೀ ಎಂ.ಸಿ. ಸ್ಪರ್ಧಿಸಿದ್ದಾರೆ. ಎರಡೂ ವಿಭಾಗದಲ್ಲಿ ಒಂದೇ ಸ್ಥಾನವಿದ್ದು ನೇರ ಹಣಾಹಣಿ ಏರ್ಪಟ್ಟಿದೆ.
2023-25ನೇ ಸಾಲಿನ ಎರಡು ವರ್ಷಗಳ ಅವಧಿಗೆ ಈ ಚುನಾವಣೆ ನಡೆಯುತ್ತಿದ್ದು, 1400ಕ್ಕೂ ಹೆಚ್ಚು ಅರ್ಹ ಮತದಾರರು ಹಕ್ಕು ಚಲಾಯಿಸಲಿದ್ದಾರೆ. ಎಸ್.ಜಿ. ಅರಗಂಜಿ ಚುನಾವಣಾಧಿಕಾರಿಗಳಾಗಿದ್ದಾರೆ.