ಹುಬ್ಬಳ್ಳಿ: ಹುಬ್ಬಳ್ಳಿ ಆಕಾಶ ಬುಟ್ಟಿ ಹಬ್ಬದ 5ನೇ ವರ್ಷದ ಕಾರ್ಯಕ್ರಮ ನಿಮಿತ್ತ ಇಲ್ಲಿಯ ಮೂರುಸಾವಿರ ಮಠದ ಆವರಣದಲ್ಲಿ ಶನಿವಾರ ಲೋಗೋ ಅನಾವರಣ ಮಾಡಲಾಯಿತು.
ಶ್ರೀ ಗುರುಸಿದ್ಧರಾಜಯೋಗೀಂದ್ರ ಸ್ವಾಮೀಜಿ ಲೋಗೋ ಅನಾವರಣಗೊಳಿಸಿದರು. ಹುಬ್ಬಳ್ಳಿ ಆಕಾಶ ಬುಟ್ಟಿ ಕಾರ್ಯಕ್ರಮವು ಜ. 5ರಂದು ನಡೆಯಲಿದೆ.
ಅಧ್ಯಕ್ಷ ರಾಜು ಜರತಾರಘರ, ಪ್ರಧಾನ ಕಾರ್ಯದರ್ಶಿಗಳಾದ ದೇವದಾಸ ಹಬೀಬ, ಪ್ರಕಾಶ ಬುರಬುರೆ, ಪ್ರಮುಖರಾದ ಪ್ರವೀಣ ಪವಾರ, ರೇಣುಕಾ ಇರಕಲ, ವೆಂಕಟೇಶ ಕಾಟವೆ, ಮಿಥುನ ಚವ್ಹಾಣ, ವಿನಾಯಕ ಲದವಾ, ದೀಪಕ ಜಿತೂರಿ, ರಾಘವೇಂದ್ರ ಪವಾರ, ಅಕ್ಷಯ ಬದ್ದಿ, ಮಂಜು ಪವಾರ, ಸಚಿನ್ ಕಾಟವೆ, ರಾಜಶ್ರೀ ಜಡಿ, ಸುನಿತಾ ಜರತಾರಘರ, ಪ್ರತಿಭಾ ಪವಾರ, ಸೀಮಾ ಲದವಾ, ಶೋಭಾ ನಾಕೋಡ, ಪೂರ್ಣಿಮಾ ಶಿಂಧೆ ಇತರರು ಇದ್ದರು.