ಹುಬ್ಬಳ್ಳಿ: ಇಲ್ಲಿನ ದೇಶಪಾಂಡೆ ನಗರದ ಸವಾಯಿ ಗಂಧರ್ವ ಸಭಾಂಗಣದಲ್ಲಿ ನಮೋ ಬ್ರಿಗೇಡ್ ವತಿಯಿಂದ ಡಿ. 8,9 ಹಾಗೂ 10ರಂದು ಪ್ರತಿನಿತ್ಯ ಸಂಜೆ 6.30ಕ್ಕೆ ಇನ್ನೂ ಮಲಗಿದರೆ, ಏಳುವಾಗ ಭಾರತವಿರುವುದಿಲ್ಲ ! ಎಂಬ ವಿನೂತನ 3 ದಿನಗಳ ಸರಣಿ ಉಪನ್ಯಾಸ ಹಮ್ಮಿಕೊಳ್ಳಲಾಗಿದೆ ಎಂದು ನಮೋ ಬ್ರಿಗೇಡ್ ಜ್ಲಿಲಾ ಸಂಚಾಲಕ ಪ್ರಹ್ಲಾದ ಭಸ್ಮೆ ಹೇಳಿದರು.
ನಗರದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಖ್ಯಾತ ವಾಗ್ಮಿ, ಲೇಖಕ ಯುವಾ ಬ್ರಿಗೇಡ್ ಸಂಸ್ಥಾಪಕ ಚಕ್ರವರ್ತಿ ಸೂಲಿಬೆಲೆ ಉಪನ್ಯಾಸ ನೀಡಲಿದ್ದಾರೆ. ನಿತ್ಯ 400ರಿಂದ 500 ಸಾರ್ವಜನಿಕರು ಮತ್ತು ವಿದ್ಯಾರ್ಥಿಗಳು ಭಾಗವಹಿಸುವ ನಿರೀಕ್ಷೆ ಇದೆ ಎಂದರು.
ಇತ್ತೀಚಿನ ದಿನಗಳಲ್ಲಿ ಭಾರತವನ್ನು ನಾಶಗೈಯುತ್ತಿರುವ ದುಷ್ಟಶಕ್ತಿಗಳು, ಅವರ ತಾಳಕ್ಕೆ ಕುಣಿಯುತ್ತಿರುವ ದೇಶದೊಳಗಿನ ದ್ರೋಹಿಗಳು ಮತ್ತು ಅವರನ್ನೆಲ್ಲ ಎದುರಿಸುತ್ತಿರುವ ದೇಶಭಕ್ತರ ಪಡೆ ಕುರಿತು ಚರ್ಚಿಸಲಾಗುವುದು ಎಂದು ತಿಳಿಸಿದರು. ಸಂತೋಷಗೌಡ ಕಂಟೆಪ್ಪಗೌಡರ, ಮಂಜುನಾಥ ಹೆಗ್ಗೇರಿ, ಚಿದಂಬರ ಶಾಸ್ತ್ರೀ ಸುದ್ದಿಗೋಷ್ಠಿಯಲ್ಲಿ ಇದ್ದರು.