ಜಿಲ್ಲೆ

ಕುಸುಗಲ್ಲ ಗ್ರಾಪಂಗೆ ಶೀಘ್ರ ಹೈಟೆಕ್ ಕಟ್ಟಡ

ಹುಬ್ಬಳ್ಳಿ: ತಾಲೂಕಿನ ಕುಸುಗಲ್ಲ ಗ್ರಾಮದಲ್ಲಿ ಶೀಘ್ರ ಹೈಟೆಕ್ ಗ್ರಾಮ ಪಂಚಾಯಿತಿ ಕಟ್ಟಡ ನಿರ್ಮಾಣ ಕಾಮಗಾರಿ ಆರಂಭಿಸಲಾಗುವುದು ಎಂದು ಶಾಸಕ ಎನ್.ಎಚ್. ಕೋನರಡ್ಡಿ ಹೇಳಿದರು.

ಗ್ರಾಮದ ಸರ್ಕಾರಿ ಪ್ರಾಥಮಿಕ ಕನ್ನಡ ಗಂಡು ಮಕ್ಕಳ ಶಾಲೆಯಲ್ಲಿ ನೂತನ ರಂಗ ಮಂದಿರವನ್ನು ಸೋಮವಾರ ಉದ್ಘಾಟಿಸಿ ಅವರು ಮಾತನಾಡಿದರು.

ನಂತರ ಗ್ರಾಮದ ಡಿಪಿಇಪಿ ಶಾಲೆಯ ನೂತನ ಕೊಠಡಿ, ಶ್ರೀ ಕಲ್ಮೇಶ್ವರ ದೇವರ ಗುಡಿ ಸಮುದಾಯ ಭವನ ಉದ್ಘಾಟನೆ, ಸರ್ಕಾರಿ ಉರ್ದು ಶಾಲಾ ದುರಸ್ತಿ ಕಾಮಗಾರಿ, ಗ್ರಾಮದ ಎಸ್​ಟಿ ಓಣಿಯಲ್ಲಿ ಕಾಂಕ್ರೀಟ್ ರಸ್ತೆ ನಿರ್ಮಾಣ ಕಾಮಗಾರಿ, ಮುಸ್ಲಿಂ ಸಮುದಾಯ ಭವನ ಕಾಮಗಾರಿ, ಗ್ರಾಮದ ಮಾರುತಿ ನಗರದಲ್ಲಿ ಸಿ.ಡಿ. ನಿರ್ಮಾಣ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿದರು.

ಗ್ರಾಮ ಪಂಚಾಯಿತಿ ಅಧ್ಯಕ್ಷೆ ನೀಲವ್ವ ಮಠಪತಿ, ಉಪಾಧ್ಯಕ್ಷೆ ಜೈತುನಬಿ ನದಾಫ್, ಸದಸ್ಯರಾದ ರಾಜು ಸಂಕರಡ್ಡಿ, ಸುರೇಶಗೌಡ ಪಾಟೀಲ, ಮಂಜುನಾಥ ಪಟ್ಟಣಶೆಟ್ಟಿ, ಸಂತೋಷ ಗುಡಸಲಮನಿ, ನೀಲಪ್ಪ ತಹಶೀಲ್ದಾರ, ಮಲಂಗಸಾಬ್ ಗುದಗಿ, ಸೋಮನಗೌಡ ಪಾಟೀಲ, ಅಶ್ಪಾಕಅಹ್ಮದ ಕಮಡೊಳ್ಳಿ, ಶಕೀರಾಬಾನು ಹುಬ್ಬಳ್ಳಿ, ಗಿರಿಜವ್ವ ನೂಲ್ವಿ, ರಾಜಬಿ ನದಾಫ, ನೀಲವ್ವ ಡಾಲಾಯತರ, ಮಮತಾಜಬಿ ಪೀರಖಾನವರ, ಗ್ರಾಮದ ಹಿರಿಯರಾದ ವಿ.ಎಸ್. ಕೆಂಚನಗೌಡ್ರ, ಎಫ್.ಡಿ. ಪಾಟೀಲ, ಶಿವಣ್ಣ ಹೊಸಮನಿ, ಟೋಪನಗೌಡ ಚವನಗೌಡ್ರ, ಕೆಂಚಪ್ಪ ಶಿವಳ್ಳಿ, ಎಸ್.ಎಸ್. ಪಾಟೀಲ, ರಮೇಶ ಚವ್ವಣ್ಣವರ, ಅಶೋಕ ಸಂಕಡ್ಡಿ, ಶಂಭು ಸಂಕರಡ್ಡಿ, ತಹಸೀಲ್ದಾರ್ ಜೆ.ಬಿ. ಮಜ್ಜಗಿ, ಹುಬ್ಬಳ್ಳಿ ಗ್ರಾಮೀಣ ಬಿಇಒ ಉಮೇಶ ಬೊಮ್ಮಕ್ಕನವರ, ಬಿ.ಎನ್. ಗೌಡರ, ಎಸ್.ಆರ್. ಮಂಟೂರ ಇತರರಿದ್ದರು. ಬಿ.ವೈ. ಬಾಗಿ, ಗ್ರಾಪಂ ಕಾರ್ಯದರ್ಶಿ ರಾರ್ಬಟ್ ಮನೋಹರ ನಿರ್ವಹಿಸಿದರು.