ಜಿಲ್ಲೆ

ಕೇಶ್ವಾಪುರ ಎಸ್​ಬಿಐ ಮೇನ್ ಬ್ರಾಂಚ್ ನಲ್ಲಿ ಕಂಡುಬಂದ #SocialDistancing ಮಾದರಿ ಹೀಗಿತ್ತು ನೋಡಿ..

ಹುಬ್ಬಳ್ಳಿ: ಕರೊನಾ ವೈರಸ್ Covid19 ಸೋಂಕು ಹರಡದಂತೆ ಮುಂಜಾಗ್ರತಾ ಕ್ರಮಗಳನ್ನು ಎಲ್ಲರೂ ತೆಗೆದುಕೊಳ್ಳಲಾರಂಭಿಸಿದ್ದಾರೆ. ಆದರೆ, ಕೆಲವೊಮ್ಮೆ ನಮ್ಮ ಈ ಮುಂಜಾಗ್ರತಾ ಕ್ರಮಗಳು ಅಪಹಾಸ್ಯಕ್ಕೆ ಗುರಿಯಾಗದಂತೆ ನೋಡಿಕೊಳ್ಳಬೇಕಾದ ಸಾಮಾನ್ಯ ಅರಿವು ಕೂಡ ಎಚ್ಚರವಾಗಿರಬೇಕು ಎಂಬುದು ಕೂಡ ಅಷ್ಟೇ ಸತ್ಯ.

ಕರೊನಾ ವೈರಸ್ ಸೋಂಕಿನ ಬಗ್ಗೆ ಭಯ ಬೇಕಾಗಿಲ್ಲ. ಆದರೆ, ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂಬುದು ಕೂಡ ನಿರಾಕರಿಸಲಾಗದ ಕಟುವಾಸ್ತವ. ಇದಕ್ಕಾಗಿಯೇ #SocialDistancing ಕ್ರಮದ ಬಗ್ಗೆ ತಿಳಿವಳಿಕೆಯನ್ನೂ ಮೂಡಿಸಲಾಗುತ್ತಿದೆ. ಕಳೆದ ಎರಡು ದಿನಗಳ ಅವಧಿಯಲ್ಲಿ ಇದಕ್ಕೆ ಸಂಬಂಧಿಸಿದ ಅನೇಕ ಟ್ವೀಟ್​ಗಳು, ಫೇಸ್​ಬುಕ್ ಅಪ್ಡೇಟ್ಸ್ ಎಲ್ಲವೂ ದೇಶವಾಸಿಗಳ ಗಮನಸೆಳೆದಿದೆ.

ಈಗ ಈ ವಿಚಾರದಲ್ಲಿ ಗಮನಸೆಳೆದಿರುವುದ ಹುಬ್ಬಳ್ಳಿ ಕೇಶ್ವಾಪುರದ ಎಸ್​ಬಿಐ ಮೇನ್ ಬ್ರಾಂಚ್​. ಈ ಶಾಖೆಯಲ್ಲಿ ಕರೊನಾ ವೈರಸ್ ಆತಂಕದಿಂದ ಗ್ರಾಹಕರಿಂದ ಅಂತರ ಕಾಯ್ದುಕೊಳ್ಳಲು ಬ್ಯಾಂಕ್ ಸಿಬ್ಬಂದಿ ಇನ್ನೋವೇಟಿವ್ ಐಡಿಯಾ ಕಂಡುಕೊಂಡಿದ್ದಾರೆ. ಸಿಬ್ಬಂದಿಯ ಟೇಬಲ್ ಬಳಿ ಗ್ರಾಹಕರು ಬರದಂತೆ ಒಂದು ಮೀಟರ್ ದೂರದವರೆಗೆ ಪ್ಲಾಸ್ಟಿಕ್ ದಾರ ಕಟ್ಟಿರುವುದು ಈಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.