ಹುಬ್ಬಳ್ಳಿ: ವಿದ್ಯುತ್ ಸಂಪರ್ಕಕ್ಕೆ ಒಳಗಾಗಿ ಆಕಳು ಮತ್ತು ಕರು ಮೃತಪಟ್ಟ ಘಟನೆ ನಗರದ ಅಕ್ಕಿಹೊಂಡದಲ್ಲಿ ಶುಕ್ರವಾರ ಸಂಭವಿಸಿದೆ. ಸ್ಮಾರ್ಟ್‌ಸಿಟಿ ಅನುದಾನದಲ್ಲಿ ರಸ್ತೆ ಬದಿಯ ಫುಟ್‌ಪಾತ್ ಮೇಲೆ ನೆಲಮಟ್ಟದಲ್ಲಿ ಅಳವಡಿಸಿರುವ ವಿದ್ಯುತ್ ಪರಿವರ್ತಕ (ಟ್ರಾನ್ಸ್‌ಫಾರ್ಮರ್)ದ ಬಳಿ ಬಂದಾಗ ಆಕಳು ಮತ್ತು ಕರು ವಿದ್ಯುತ್ ಸಂಪರ್ಕಕ್ಕೆ ಒಳಗಾಗಿ ತಕ್ಷಣವೇ ಮೃತಪಟ್ಟಿವೆ. ನೆಲಮಟ್ಟದಲ್ಲಿ ಬಾಕ್ಸ್ ಟೈಪ್ ಟ್ರಾನ್ಸ್‌ಫಾರ್ಮರ್ ಅಳವಡಿಸಿರುವುದಕ್ಕೆ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಒಂದು ವೇಳೆ ಜಾನುವಾರು ಬದಲು ಮನುಷ್ಯರು ಸಂಪರ್ಕಕ್ಕೆ ಒಳಗಾದರೆ ಹೇಗೆ ಎಂಬುದು ಸ್ಥಳೀಯರ ಪ್ರಶ್ನೆಯಾಗಿದೆ. ಸಾರ್ವಜನಿಕರ ದೂರಿನ ಹಿನ್ನೆಲೆಯಲ್ಲಿ ಘಂಟಿಕೇರಿ ಠಾಣೆ ಪೊಲೀಸರು ಸ್ಥಳಕ್ಕೆ ತೆರಳಿ, ಪರಿಶೀಲನೆ ನಡೆಸಿದ್ದಾರೆ.