ನಂದೇಶ್ವರ: ರಾಷ್ಟ್ರೋತ್ಥಾನ ಶಿಕ್ಷಣ ಸಂಸ್ಥೆಯು ರಕ್ತದಾನ ಶಿಬಿರ ಆಯೋಜಿಸಿದ್ದು ಎಲ್ಲರಿಗೂ ಮಾದರಿ ಎಂದು ತಾಲೂಕು ವೈದ್ಯಾಧಿಕಾರಿ ಡಾ.ಬಸಗೌಡ ಕಾಗೆ ಹೇಳಿದರು.
ಸಮೀಪದ ಅವರಖೋಡ ಗ್ರಾಮದ ರಾಷೊ್ಟ್ರೀೀತ್ಥಾನ ಶಿಕ್ಷಣ ಸಂಸ್ಥೆಯಲ್ಲಿ ಆಯೋಜಿಸಿದ್ದ ರಕ್ತದಾನ ಶಿಬಿರದಲ್ಲಿ ಮಾತನಾಡಿ, ರಕ್ತದಾನ ಮಾಡಲು ಪ್ರತಿಯೊಬ್ಬರು ಮುಂದೆ ಬರಬೇಕು. ರಕ್ತದಾನದಿಂದ ಮತ್ತೊಬ್ಬರ ಜೀವ ಉಳಿಯಲು ಸಾಧ್ಯ ಎಂದರು.
ರಾಷ್ಟ್ರೋತ್ಥಾನ ಸಂಸ್ಥೆ ಸಂಸ್ಥಾಪಕ ಶಿವಬಸವ ನಾಯಕ, ನಾಗನೂರ ಪಿ.ಕೆ. ಗ್ರಾಪಂ ಅಧ್ಯಕ್ಷ ಶ್ರೀಕಾಂತ ದರೂರ, ಕಾರ್ಯದರ್ಶಿ ಮಾಲತಿ ನಾಯಕ, ಭೀರಪ್ಪ ಲೋಕೂರ, ದಶರಥ ಸಾಳುಂಕೆ, ಗಿರೀಶ ಜಮಖಂಡಿ, ಎ.ಬಿ.ಗೂಳಿದರ, ವೈ.ಎಚ್.ದಾಸರ, ಲಕ್ಷ್ಮಣ ಆಲೂರ, ಶಂಕರ ನಾಯಕ, ಸುರೇಶ ಜಾಧವ, ಬಸವರಾಜ ನಿಂಗವ್ವಗೋಳ ಇತರರಿದ್ದರು.