ತಾಂಬಾ ಗ್ರಾಮದಲ್ಲಿ ಸರ್ಕಾರಿ ಪ್ರೌಢಶಾಲೆಯ ನೂತನ ಕೋಣೆಗಳನ್ನು ಸಿಂದಗಿ ಶಾಸಕ ಅಶೋಕ ಮನಗೂಳಿ ಉದ್ಘಾಟಿಸಿದರು.ಪಿ.ಕೆ.ಬಿರಾದಾರ, ಮಲ್ಲಯ್ಯ ಸಾರಂಗಮಠ, ಸಿದ್ದು ಹತ್ತಳ್ಳಿ, ರಾಮಚಂದ್ರ ದೊಡಮನಿ, ವಿಠ್ಠಲ ಹೋರ್ತಿ ಇತರರಿದ್ದರು. 
ಜಿಲ್ಲೆ

ಸರ್ಕಾರಿ ಶಾಲೆಗಳ ಅಭಿವೃದ್ಧಿಗೆ ಸರ್ಕಾರ ಬದ್ಧ್ದ

ತಾಂಬಾ: ಸರ್ಕಾರಿ ಶಾಲೆಗಳ ಅಭಿವೃದ್ಧಿಗೆ ಸರ್ಕಾರ ಬದ್ಧವಾಗಿದೆ ಎಂದು ಸಿಂದಗಿ ಶಾಸಕ ಅಶೋಕ ಮನಗೂಳಿ ಹೇಳಿದರು.

ಮಂಗಳವಾರ ಗ್ರಾಮದ ಸರ್ಕಾರಿ ಪ್ರೌಢಶಾಲೆಯ ಮೂರು ಹೊಸ ಕೋಣೆಗಳನ್ನು ಉದ್ಘಾಟಿಸಿ ಮಾತನಾಡಿದ ಅವರು, ಸರ್ಕಾರಿ ಶಾಲೆಗಳು ಅಭಿವೃದ್ಧಿಯಾಗಬೇಕಾದರೆ ಸರ್ಕಾರದ ಜತೆ ಸಮುದಾಯ ಕೈಜೋಡಿಸಬೇಕು. ಇದರಲ್ಲಿ ಶಿಕ್ಷಕರ ಪಾತ್ರ ಪ್ರಮುಖವಾಗಿದೆ ಎಂದರು.

ಸರ್ಕಾರಿ ಶಾಲೆಗಳಲ್ಲಿ ಗುಣಮಟ್ಟದ ಶಿಕ್ಷಣ ಸಿಕ್ಕರೆ ಬಡ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಅನುಕೂಲವಾಗುತ್ತದೆ. ಹೀಗಾಗಿ ಸರ್ಕಾರಿ ಶಾಲೆಗಳು ಬೆಳೆಯಬೇಕು ಎಂದು ಅವರು ಪ್ರತಿಪಾದಿಸಿದರು.

ಪ್ರೌಢಶಾಲೆ ಮುಖ್ಯೋಪಾಧ್ಯಾಯ ಪಿ.ಕೆ.ಬಿರಾದಾರ ಮಾತನಾಡಿ, ವಿದ್ಯಾರ್ಥಿಗಳಿಗೆ ಮೌಲ್ಯಯುತ ಶಿಣ ನೀಡುವುದೇ ಶಿಕರ ಕರ್ತವ್ಯ, ಗುರು&ಶಿಷ್ಯರ ಪವಿತ್ರ ಸಂಬಂಧವನ್ನು ಜಗತ್ತಿಗೆ ತೋರಿಸಿಕೊಟ್ಟ ದೇಶ ನಮ್ಮದು ಎಂದರು.

ವೇ.ಮಲ್ಲಯ್ಯ ಸಾರಂಗಮಠ ಸಾನ್ನಿಧ್ಯ ವಹಿಸಿದ್ದರು. ಎಸ್​.ಡಿ.ಎಂ.ಸಿ ಅಧ್ಯ ಸಿದ್ದು ಹತ್ತಳ್ಳಿ ಅಧ್ಯತೆ ವಹಿಸಿದ್ದರು. ಗ್ರಾಮ ಪಂಚಾಯಿತಿ ಅಧ್ಯ ಆಸ್ಮಾ ರಜಾಕ ಚಿಕ್ಕಗಸಿ, ಉಪಾಧ್ಯ ರಾಮಚಂದ್ರ ದೊಡಮನಿ, ಎಸ್​.ಡಿ.ಎಂ.ಸಿ ಉಪಾಧ್ಯ ವಿಠ್ಠಲ ಹೋರ್ತಿ, ಶ್ರೀಧರ ನಡಗಡ್ಡಿ, ರಾಚ್ಚಪ್ಪ ಗಳೇದ, ಅಪ್ಪಣ್ಣ ಕಲ್ಲೂರ, ಮಹ್ಮದ ಧಡೆದ, ಬಸವರಾಜ ಅವಟಿ, ಶಾಂತಪ್ಪ ಹಚನಾಳ, ಕಿರಣ ಕಿಣಗಿ, ವಿಶ್ವನಾಥ ಅವಟಿ, ಮಲ್ಲನಗೌಡ ಬಿರಾದಾರ, ಯಮನಪ್ಪ ಕನೋಜಿ, ಕೆಆರ್​ಐಡಿಎಲ್​ ಅಧಿಕಾರಿ ರಾಜಶೇಖರ, ಎಸ್​ಡಿಎಂಸಿ ಸದಸ್ಯರು, ಶಿಕ್ಷಕರು ಪಾಲ್ಗೊಂಡಿದ್ದರು.