ಪಟ್ಟಣದ ತಾಲೂಕು ಪಂಚಾಯಿತಿ ಕಚೇರಿಯಲ್ಲಿ ಹಮ್ಮಿಕೊಮಡಿದ್ದ ಕಾರ್ಯಕ್ರಮದಲ್ಲಿ ಶಾಸಕ ಅಶೋಕ ಮನಗೂಳಿ ವಿಕಲಚೇತನರಿಗೆ ಇಂಧನ ಚಾಲಿತ ತ್ರೀಚಕ್ರ ವಾಹನ ವಿತರಿಸಿದರು. ಶ್ರೀಚಂದ್ರಶೇಖರ ಶಿವಾಚಾರ್ಯರು, ರಾಮು ಅಗ್ನಿ, ಸಿದ್ದು ಅಂಕಲಗಿ, ಅಶೋಕ ಕೊಳಾರಿ, ಸಾ-ಧೀಕ ಸುಂಬಡ ಇದ್ದರು.  
ಜಿಲ್ಲೆ

ವಿಕಲಚೇತನರ ಅಭಿವೃದ್ಧಿಗೆ ವಿಶೇಷ ಅನುದಾನ

Vijayapura - Desk - Shamarao Kulkarni

ಆಲಮೇಲ: ವಿಕಲಚೇತನರಿಗಾಗಿ ರಾಜ್ಯ ಸರ್ಕಾರ ಬಜೇಟ್​ ನಲ್ಲಿ ಹೆಚ್ಚಿನ ಹಣ ಮೀಸಲಿಡುವ ಮೂಲಕ ಅವರ ಏಳಿಗೆಗೆ ಶ್ರಮಿಸುತ್ತಿದೆ ಎಂದು ಶಾಸಕ ಅಶೋಕ ಮನಗೂಳಿ ಹೇಳಿದರು.

ಪಟ್ಟಣದ ತಾಲೂಕು ಪಂಚಾಯಿತಿ ಕಚೇರಿಯಲ್ಲಿ ಶನಿವಾರ ಹಮ್ಮಿಕೊಮಡಿದ್ದ ಕಾರ್ಯಕ್ರಮದಲ್ಲಿ ವಿಕಲಚೇತನರಿಗೆ ಇಂಧನ ಚಾಲಿತ 15 ತ್ರೀಚಕ್ರ ವಾಹನ ವಿತರಿಸಿ ಮಾತನಾಡಿದ ಅವರು.

ವಿಕಲಚೇತನರಿಗಾಗಿ ಹಲವಾರು ಯೋಜನೆಗಳನ್ನು ರೂಪಿಸಿ ಜಾರಿಗೆ ತರುವ ಮೂಲಕ ಅವರನ್ನು ಸಮಾಜಮುಖಿಯಾಗಿ ಬದುಕುವಂತೆ ನಮ್ಮ ಸರ್ಕಾರ ಮಾಡಿದೆ ಎಂದರು.

ಕಾರ್ಯಕ್ರಮದಲ್ಲಿ ಶ್ರೀ ಚಂದ್ರಶೇಖರ ಶಿವಾಚಾರ್ಯರು ಆಶೀರ್ವಚನ ನಿಡಿದರು. ಶ್ರೀ ಶ್ರೀಶೈಲ ಅಳ್ಳೊಳ್ಳಿಮಠ, ತಾಪಂ ಅಧಿಕಾರಿ ರಾಮು ಅಗ್ನಿ, ಸಿದ್ದು ಅಂಕಲಗಿ, ಜಿಲ್ಲಾ ಕೆಡಿಪಿ ಸದಸ್ಯ ನೂರಹ್ಮದ ಅತ್ತಾರ, ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ಅಧ್ಯ ಅಶೋಕ ಕೊಳಾರಿ, ಪಪಂ ಅಧ್ಯ ಸಾಧೀಕ ಸುಂಬಡ, ನಾಗರೀಕ ವೇದಿಕೆ ಅಧ್ಯ ರಮೇಶ ಭಂಟನೂರ, ಎಪಿಎಂಸಿ ಅಧ್ಯ ಬಸವರಾಜ ಬಾಗೇವಾಡಿ, ಮಾಜಿ ಅಧ್ಯ ಪ್ರಭು ವಾಲೀಕಾರ, ವಹಾಬ ಸುಂಬಡ, ಬಸವರಾಜ ತೆಲ್ಲೂರ, ದವಲಪ್ಪ ಸೊನ್ನ, ಹಸನಸಾಬ ಮುಲ್ಲಾ ಪಾಲ್ಗೊಂಡಿದ್ದರು.