ನಾಲತವಾಡದಲ್ಲಿ ಕೃಷಿ ರಾಸಾಯನಿಕಗಳ ಮಾರಾಟಗಾರ ವೀರೇಶ ದಲಾಲಿ ರೈತರಿಗೆ ಬಿಜೋಪಚಾರದ ಮಾಹಿತಿ ನೀಡಿದರು. 
ಜಿಲ್ಲೆ

ರೈತರಿಗೆ ಬಿಜೋಪಚಾರದ ಮಾಹಿತಿ

ನಾಲತವಾಡ: ಬೀಜೋಪಚಾರ ಮಾಡುವ ವಿಧಾನ ಕುರಿತು ಕೃಷಿ ರಾಸಾಯನಿಕಗಳ ಮಾರಾಟಗಾರ ವೀರೇಶ ದಲಾಲಿ ಮಾಹಿತಿ ನೀಡಿದರು.

ರೈತರ ಬಿತ್ತನೆ ಬೀಜಗಳಿಗೆ ಬೀಜೋಪಚಾರದ ಉಚಿತ ಪ್ರಾತ್ಯಕೆ ಮೂಲಕ ಮಾಹಿತಿ ನೀಡಿ ಮಾತನಾಡಿದ ಅವರು, ಬಿತ್ತನೆ ಪೂರ್ವದಲ್ಲಿ ಬಿಜೋಪಚಾರ ಮಾಡಿದಾಗ ಉತ್ತಮ ಇಳುವರಿ ಪಡೆಯಲು ಸಾಧ್ಯ. ಬೀಜೋಪಚಾರದಿಂದ ಎಕರೆಗೆ 40&60 ಕಿಲೋ ಸಾರಜನಕ ಸಿಗುವುದಲ್ಲದೆ, ಎಕರೆಗೆ 10&15 ಕಿಲೋ ರಂಜಕ ಕರಗಿಸಲು ಸಾಧ್ಯವಾಗುತ್ತದೆ ಎಂದು ಮಾಹಿತಿ ನೀಡಿದರು. ರೈತರು ಉಪಸ್ಥಿತರಿದ್ದರು.