ಸಿಂದಗಿ ತಾಲೂಕಿನ ಹಂದಿಗನೂರದ ಕಸ್ತೂರಬಾ ಗಾಂಧಿ ಬಾಲಿಕಾ ವಿದ್ಯಾಲಯದಲ್ಲಿ ಶಾಸಕ ಅಶೋಕ ಮನಗೂಳಿ ಮಕ್ಕಳೊಂದಿಗೆ ಭೋಜನ ಮಾಡಿದರು. 
ಜಿಲ್ಲೆ

ವಿದ್ಯಾರ್ಥಿನಿಗಳೊಂದಿಗೆ ಭೋಜನ ಸವಿದ ಶಾಸಕ

Vijayapura - Desk - Shamarao Kulkarni

ವಿಜಯಪುರ: ಸಿಂದಗಿ ತಾಲೂಕಿನ ಹಂದಿಗನೂರ ಗ್ರಾಮದಲ್ಲಿ ಕಸ್ತೂರಬಾ ಗಾಂಧಿ ಬಾಲಿಕಾ ವಿದ್ಯಾಲಯದಲ್ಲಿ ಡಾರಮಿಟರಿ ನಿರ್ಮಾಣಕ್ಕೆ ಭೂಮಿ ಪೂಜೆ ನೆರವೇರಿಸಲು ಆಗಮಿಸಿದ್ದ ಶಾಸಕ ಅಶೋಕ ಮನಗೂಳಿ ಅವರು ವಿದ್ಯಾರ್ಥಿನಿಗಳೊಂದಿಗೆ ಊಟ ಸವಿದರು.

ವಿದ್ಯಾಲಯದಲ್ಲಿ 1.8 ಕೋಟಿ ರೂ.ವೆಚ್ಚದ ಹೊಸ ಡಾರಮಿಟರಿ ನಿರ್ಮಾಣಕ್ಕೆ ಭೂಮಿ ಪೂಜೆ ನೆರವೇರಿಸಿ ಮಾತನಾಡಿ, ಗುಣಮಟ್ಟದ ಕಾಮಗಾರಿ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿದರು.

ಸಮೂಹ ಸಂಪನ್ಮೂಲ ವ್ಯಕ್ತಿ ಸಂಜು ರಾಠೋಡ, ಮುಖಂಡರಾದ ಚೇತನ್​ಗೌಡ ಬಿರಾದಾರ, ಶಿವಾನಂದ ವಾಲಿ, ಶ್ರೀನಾಥ ಬಿರಾದಾರ, ಶ್ರೀಕಾಂತ ರಾಠೋಡ, ಅರವಿಂದ ದೇಸಾಯಿ, ರಾು ಚವ್ಹಾಣ, ಶಿಕ್ಷಕರು ಹಾಗೂ ವಿದ್ಯಾರ್ಥಿನಿಯರು ಉಪಸ್ಥಿತರಿದ್ದರು.