ಜಿಲ್ಲೆ

ಇಂದಿರಾ ಕ್ಯಾಂಟೀನ್​ಗೆ ನಿರ್ವಹಣೆ ಭಾಗ್ಯ

Vijayapura - Desk - Shamarao Kulkarni

ನಾಲತವಾಡ: ಆರಂಭಗೊಂಡ ನಂತರ ನಿರ್ವಹಣೆ ಕೊರತೆಯಿಂದಾಗಿ ಸಾರ್ವಜನಿಕರ ಅಪಸ್ಪರಕ್ಕೆ ಒಳಗಾಗಿದ್ದ ಇಂದಿರಾ ಕ್ಯಾಂಟಿನ್​ಗೆ ಕೊನೆಗೂ ನಿರ್ವಹಣೆ ಭಾಗ್ಯ ದೊರೆಕಿದ್ದು ಸಂತಸ ತಂದಿದೆ.

ಹಲವು ಕಾರಣಗಳಿಂದ ಪಾಲನೆ, ಸ್ವಚ್ಛತೆ, ಅಡುಗೆ ಉಪಕರಣಗಳ ಬಳಕೆ ಮತ್ತು ಸಿಬ್ಬಂದಿಗಳ ಕೊರತೆ ಹಿನ್ನಲೆಯಲ್ಲಿ ಸಾರ್ವಜನಿಕರಿಗೆ ಸೇವೆ ನೀಡುವಲ್ಲಿ ವಿಲವಾಗಿತ್ತು.

ಕ್ಯಾಂಟಿನ್​ ಸುತ್ತಲೂ ನೀರು ನಿಲ್ಲುತ್ತಿತ್ತು, ನೀರಿನಲ್ಲೇ ನಿಂತು ತಿಂಡಿ, ಊಟ ಮಾಡುವ ಅನಿವಾರ್ಯತೆ ಸಾರ್ವಜನಿಕರಿಗಿತ್ತು. ಸ್ವಚ್ಛತೆಗೆ ಆದ್ಯತೆ ನೀಡುವಂತೆ ಶಾಸಕರು ಸೂಚಿಸಿದರೂ ಪ್ರಯೋಜನವಾಗಿರಲಿಲ್ಲ. ಕೊನೆಗೂ ಪಟ್ಟಣ ಪಂಚಾಯಿತಿ ಅಧಿಕಾರಿಗಳು ಮತ್ತು ಕ್ಯಾಂಟಿನ್​ ಗುತ್ತಿಗೆದಾರರು ಸ್ವಚ್ಛತೆಗೆ ಮುಂದಾಗಿದ್ದಾರೆ. ಅಡುಗೆ ಸಿದ್ದಪಡಿಸುವ ಹೊಸ ಉಪಕರಣಗಳನ್ನು ಅಳವಡಿಸಿಲಾಗಿದೆ. ಇನ್ಮುಂದೆ ನಿಯಮಾನುಸಾರ ಊಟದ ವ್ಯವಸ್ಥೆ ಮಾಡಲಾಗುವುದು ಎಂದು ಗುತ್ತಿಗೆದಾರರು ಭರವಸೆ ನೀಡಿದ್ದಾರೆ.