ಬಿ.ಐ.ಹಿರೇಹೊಳಿ  
ಜಿಲ್ಲೆ

ಬಸವಶ್ರೀ ಪ್ರಶಸ್ತಿಗೆ ಹಿರೇಹೊಳಿ ಆಯ್ಕೆ

Vijayapura - Desk - Shamarao Kulkarni

ತಾಳಿಕೋಟೆ: ಧಾರವಾಡ ನಾಟ್ಯಸ್ಫೂರ್ತಿ ಆರ್ಟ್​, ಕಲ್ಚರಲ್​ ಅಕಾಡೆಮಿ ಕೊಡಮಾಡುವ ರಾಜ್ಯಮಟ್ಟದ ಬಸವಶ್ರೀ ಪ್ರಶಸ್ತಿಗೆ ಪಟ್ಟಣದ ಸಂಗಮೇಶ್ವರ ಪ್ರೌಢಶಾಲೆ ಶಿಕ ಬಿ.ಐ. ಹಿರೇಹೊಳಿ ಆಯ್ಕೆಯಾಗಿದ್ದಾರೆ.

ಜೂ.15 ರಂದು ಧಾರವಾಡದ ಆಲೂರ ವೆಂಕಟರಾವ ಭವನದಲ್ಲಿ ನಡೆಯಲಿರುವ ವಾರ್ಷಿಕೋತ್ಸವ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ಅಕಾಡೆಮಿ ಪ್ರಕಟಣೆಯಲ್ಲಿ ತಿಳಿಸಿದೆ.