Government schools should be empowered. 
ಜಿಲ್ಲೆ

ಸರ್ಕಾರಿ ಶಾಲೆಗಳು ಸಬಲೀಕರಣವಾಗಲಿ

Vijayapura - Desk - Shamarao Kulkarni

ಗೊಳಸಂಗಿ: ಖಾಸಗಿ ಶಾಲೆಗಳ ವೈಭವೀಕರಣದಲ್ಲಿ ಸರ್ಕಾರಿ ಶಾಲೆಗಳ ಗುಣಮಟ್ಟ ಪ್ರಶ್ನಿಸುವಂತಾಗಬಾರದು. ಶಿಕರ ಕಲಿಕಾ ಸಾಮರ್ಥ್ಯ ಮತ್ತು ಎಸ್​ಡಿಎಂಸಿಯವರ ಸಹಕಾರದಿಂದ ಸರ್ಕಾರಿ ಶಾಲೆಗಳು ಸಬಲೀಕರಣಗೊಳ್ಳಬೇಕು ಎಂದು ಎಸ್​ಡಿಎಂಸಿ ಸದಸ್ಯ ಅಮರೇಶಗೌಡ ಪಾಟೀಲ ಹೇಳಿದರು.

ಸ್ಥಳಿಯ ಸರ್ಕಾರಿ ಕನ್ನಡ ಹೆಣ್ಣು ಮಕ್ಕಳ ಮಾದರಿ ಪ್ರಾಥಮಿಕ ಶಾಲೆಯಲ್ಲಿ ಶನಿವಾರ ವಿದ್ಯಾರ್ಥಿನಿಯರಿಗೆ ಉಚಿತ ಪಠ್ಯಪುಸ್ತಕ ಮತ್ತು ಸಮವಸ್ತ್ರ ವಿತರಿಸಿ ಮಾತನಾಡಿದರು.

ಎಸ್​ಡಿಎಂಸಿ ಮಾಜಿ ಅಧ್ಯ ಡಿ.ಬಿ.ಕುಪ್ಪಸ್ತ (ಡಿಬಿಕೆಜಿ) ಮಾತನಾಡಿ, ಮಕ್ಕಳ ಕಲಿಕೆಗೆ ಸರ್ಕಾರಿ ಶಾಲೆ, ಖಾಸಗಿ ಶಾಲೆಗಳು ಅಳತೆಗೋಲು ಆಗಬಾರದು. ಕಿಲಿಕೆ ಉತ್ತೇಜನಕ್ಕಾಗಿ ಸರ್ಕಾರಿ ಶಾಲೆಗಳಿಗೆ ಇಲಾಖೆ ಕೊಟ್ಯಂತರ ರೂ. ಅನುದಾನ ವಿನಿಯೋಗಿಸುತ್ತಿದೆ. ಆದರೂ ಸರ್ಕಾರಿ ಶಾಲೆಗಳಲ್ಲಿ ಮಕ್ಕಳ ಸಂಖ್ಯೆ ಇಳಿಮುಖವಾಗುತ್ತಿದೆ. ಮೊದಲು ಶಿಕರು ತಮ್ಮ ಮಕ್ಕಳನ್ನು ಸರ್ಕಾರಿ ಶಾಲೆಗೆ ಸೇರಿಸುವಂತಾಗಬೇಕು ಎಂದರು.

ಎಸ್​ಡಿಎಂಸಿ ಉಪಾಧ್ಯ ಈರಪ್ಪ ಪರಮಗೊಂಡ ಅಧ್ಯತೆ ವಹಿಸಿದ್ದರು. ಎಸ್​ಡಿಎಂಸಿ ಸದಸ್ಯರಾದ ಸುನಂದಾ ರೂಢಗಿ, ಯಶೋದಾ ಸಿನ್ನೂರ, ಡಾ.ಮಲ್ಲಾರಿ ಪವಾರ, ಚಂದಪ್ಪ ಬೇನಾಳ, ಬಾಷಾಸಾಬ ಕಿರಿಶಾಳ, ಮುಖ್ಯಗುರು ಆರ್​.ಎಚ್​.ಬುದ್ನಿ, ಶಿಕಿಯರು ಇದ್ದರು.

ದೈಹಿಕ ಶಿಕ ಪಿ.ಎಸ್​.ಈಜೇರಿ ಸ್ವಾಗತಿಸಿದರು.ಶಿಕ್ಷಕಿ ಕೀರ್ತಿ ಆಶ್ರಿತ ನಿರೂಪಿಸಿದರು. ಶಿಕಿ ಭಾರತಿ ಗೊಂಗಡಿ ವಂದಿಸಿದರು.