ಅಂಗಡಗೇರಿ ಗ್ರಾಮದ ಸರ್ಕಾರಿ ಕನ್ನಡ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಪರಿಸರ ದಿನ ಆಚರಿಸಲಾಯಿತು. ಕೃಷಿ ಅಧಿಕಾರಿ ರಾಜು ಬೆಟಗೇರಿ, ಮೇಲ್ವಿಚಾರಕ ಯಲ್ಲಪ್ಪ ಕೊಚ್ಚರಕಿ, ರಿಯಾನಾ ಅತಾವಾಲೆ, ಯಮನೂರಿ ಮೇಲಿನಮನಿ ಮತ್ತಿತರರಿದ್ದರು. 
ಜಿಲ್ಲೆ

ಪರಿಸರ ಸಂರಣೆ ಕರ್ತವ್ಯವಾಗಲಿ

Vijayapura - Desk - Shamarao Kulkarni

ಗೊಳಸಂಗಿ: ಪರಿಸರ ನಾಶದಲ್ಲೇ ಅಭಿವೃದ್ಧಿ ಸಾಧ್ಯ ಎಂದು ನಂಬಿರುವ ನಮ್ಮ ನಡೆ ತರವಲ್ಲ. ಪರಿಸರ ಸಂರಣೆಯಲ್ಲಿ ಪ್ರತಿಯೊಬ್ಬರೂ ಕೈಜೋಡಿಸುವುದು ಅನಿವಾರ್ಯತೆ ಇದೆ ಎಂದು ಕೃಷಿ ಅಧಿಕಾರಿ ರಾಜು ಬೆಟಗೇರಿ ಹೇಳಿದರು.

ಅಂಗಡಗೇರಿ ಗ್ರಾಮದ ಸರ್ಕಾರಿ ಕನ್ನಡ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಹಮ್ಮಿಕೊಂಡಿದ್ದ ಪರಿಸರ ದಿನಾಚರಣೆಯಲ್ಲಿ ಪಾಲ್ಗೊಂಡು ಮಾತನಾಡಿದರು.

ಗೊಳಸಂಗಿ ವಲಯ ಮೇಲ್ವಿಚಾರಕ ಯಲ್ಲಪ್ಪ ಕೊಚ್ಚರಕಿ ಮಾತನಾಡಿ, ಪರಿಸರ ಸಂರಣೆ ಮಾಡದಿದ್ದರೆ ಭವಿಷ್ಯದಲ್ಲಿ ನಾವೆಲ್ಲ ಉಸಿರಾಡುವ ಗಾಳಿಯನ್ನೂ ಖರೀದಿಸುವ ಕಾಲ ಎದುರಾದೀತು ಎಂದು ಎಚ್ಚರಿಸಿದರು.

ಮುಖ್ಯಗುರು ಕೆ.ಆರ್​.ಲಮಾಣಿ, ಸೇವಾ ಪ್ರತಿನಿಧಿ ರಿಯಾನಾ ಅತಾವಾಲೆ, ಒಕ್ಕೂಟದ ಅಧ್ಯೆ ಶಿವುಬಾಯಿ ಹಡಗಲಿ, ಯಮನೂರಿ ಮೇಲಿನಮನಿ, ಸಂದ ಸದಸ್ಯರಾದ ಲಕ್ಷಿ$್ಮಬಾಯಿ ಮಾದರ, ತಾಯವ್ವ ಮಾದರ, ರೇಣುಕಾ ಮಾದರ, ಶಶಿಕಲಾ ರಗಪ್ಪಗೋಳ, ಗೀತಾ ಕಾಖಂಡಕಿ, ಶಿವಲೀಲಾ ತೆಲಗಿ ಇದ್ದರು.