ಹೊರ್ತಿಗ್ರಾಮದಲ್ಲಿ ರೈತ ಸಹಾಯಕ ಎಸ್​.ಎನ್​.ಪಟ್ಟಣಶೆಟ್ಟಿ ಅವರು ರೈತರಿಗೆ ತೊಗರಿ ಬೀಜಗನ್ನು ವಿತರಿಸಿದರು. ಶರಣುಬಸು ಡೋಣಗಿ, ಎನ್​.ಎಂ. ಹಿಟ್ಟಳ್ಳಿ, ಅಮಸಿದ್ದ ಪೂಜಾರಿ, ರಾಜಕುಮಾರ ತಂಗಡಗಿ ಇತರರಿದ್ದರು. 
ಜಿಲ್ಲೆ

ರಿಯಾಯಿತಿ ದರದಲ್ಲಿ ಬಿತ್ತನೆ ಬೀಜ

Vijayapura - Desk - Shamarao Kulkarni

ಹೊರ್ತಿ: ರಿಯಾಯಿತಿ ದರದಲ್ಲಿ ಬಿತ್ತನೆ ಬೀಜ ವಿತರಿಸಲಾಗುತ್ತಿದ್ದು, ರೈತರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಬಳ್ಕೊಳ್ಳಿ ವ್ಯಾಪ್ತಿಯ ಕೃಷಿ ಕಚೇರಿಯ ರೈತ ಸಹಾಯಕ ಎಸ್​.ಎನ್​.ಪಟ್ಟಣಶೆಟ್ಟಿ ಹೇಳಿದರು.

ಬುಧವಾರ ರೈತರಿಗೆೆ ತೊಗರಿ ಬೀಜ ವಿತರಿಸಿ ಮಾತನಾಡಿದ ಅವರು, ಸದ್ಯ ತೊಗರಿ ಬಿತ್ತನೆಗೆ ಅನುಕೂಲಕರ ವಾತವರಣವಿದ್ದು, ರೈತರು ತೊಗರಿ ಬಿತ್ತನೆ ಚಟುವಟಿಕೆಯಲ್ಲಿ ತೊಡಗಬೇಕು. ಸಜ್ಜೆ, ಮೆಕ್ಕೆಜೋಳ, ಹೆಸರು ಬೀಜಗಳನ್ನು ಸಹ ರೈತರಿಗೆ ವಿತರಿಸಲಾಗುತ್ತಿದೆ ಎಂದರು.

ಗ್ರಾ.ಪಂ. ಸದಸ್ಯ ಶರಣುಬಸು ಡೋಣಗಿ, ಕೃಷಿ ಕಚೇರಿ ಅಧಿಕಾರಿ ಎನ್​.ಎಂ. ಹಿಟ್ಟಳ್ಳಿ, ಅಮಸಿದ್ದ ಪೂಜಾರಿ, ರಾಜಕುಮಾರ ತಂಗಡಗಿ, ಸಿದ್ದಪ್ಪ ಪೂಜಾರಿ, ಗಂಗಾರಾಮ ಪೂಜಾರಿ, ಲಗ್ಮಬಾಯಿ ಪೂಜಾರಿ, ಸಿದ್ದರಾಮಯ್ಯ ಹಿರೇಮಠ, ಪರಶು ಮಾದರ ಹಾಗೂ ರೈತರು ಇದ್ದರು.