ಎಚ್​.ಹೆಸ್​. ಪಾಟೀಲ 
ಜಿಲ್ಲೆ

ರೈತರು ಸಕಾಲದಲ್ಲಿ ವಿಮಾ ಕಂತು ಪಾವತಿಸಿ

Vijayapura - Desk - Shamarao Kulkarni

ಇಂಡಿ: ಹವಾಮಾನ ವೈಪರಿತ್ಯದಿಂದ ಹಣ್ಣಿನ ಬೆಳೆಗಳಿಗೆ ಹಾನಿಯಾದರೆ ರೈತರಿಗೆ ತೊಂದರೆಯಾಗಬಾರದೆಂದು ಸರ್ಕಾರ ವಿಮೆ ಯೋಜನೆ ಜಾರಿಗೆ ತಂದಿದೆ. ರೈತರು ಸಕಾಲದಲ್ಲಿ ವಿಮಾ ಕಂತು ಪಾವತಿಸಬೇಕು ಎಂದು ತೋಟಗಾರಿಕಾ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕ ಎಚ್​.ಎಸ್​.ಪಾಟೀಲ ಮನವಿ ಮಾಡಿದ್ದಾರೆ.

ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಿಂಬೆ, ದಾಳಿಂಬೆ ಬೆಳೆಗೆ ವಿಮಾ ನೋಂದಣಿಗೆ ಜೂ.30 ಕೊನೆ ದಿನ, ದ್ರಾ ಬೆಳೆಗೆ ಸೆಪ್ಟೆಂಬರ್​ 15 ಕೊನೆ ದಿನವಾಗಿದೆ. ಈ ಅವಧಿಯೊಳಗಾಗಿ ರೈತರು ವಿಮಾ ಕಂತು ಪಾವತಿಸಿ, ತಮ್ಮ ಬೆಳೆ ಭದ್ರಪಡಿಸಿಕೊಳ್ಳಬೇಕೆಂದು ಅವರು ತಿಳಿಸಿದ್ದಾರೆ.

ದಾಳಿಂಬೆ ಬೆಳೆ ಪ್ರತಿ ಹೆಕ್ಟರ್​ ಪ್ರದೇಶಕ್ಕೆ ವಿಮಾ ಮೊತ್ತ 6350 ರೂ ಇದ್ದು, ಈ ವಿಮಾ ಅನ್ವಯಿಸುವ ಅವಧಿ ಜು.1ರಿಂದ ಡಿಸೆಂಬರ್​ 31ರ ವರೆಗೆ ಆಗಿರುತ್ತದೆ.

ನಿಂಬೆ ಬೆಳೆಗೆ ಪ್ರತಿ ಹೆಕ್ಟರ್​ ಪ್ರದೇಶಕ್ಕೆ 2800 ವಿಮಾ ಮೊತ್ತವಿದ್ದು. ವಿಮಾ ಅನ್ವಯಿಸುವ ಅವಧಿ ಜು.1ರಿಂದ ಡಿಸೆಂಬರ್​ 31ರ ವರೆಗೆ ಆಗಿರುತ್ತದೆ.

ಅದರಂತೆ ದ್ರಾ ಬೆಳೆಗೆ ಪ್ರತಿ ಹೆಕ್ಟರ್​ ಪ್ರದೇಶಕ್ಕೆ ವಿಮಾ ಮೊತ್ತ 14000 ಆಗಿದ್ದು, ವಿಮಾ ಅವಧಿ ಸೆಪ್ಟಂಬರ್​16ರಿಂದ 30 ಏಪ್ರಿಲ್​ 2026ರ ವರೆಗೆ ಆಗಿರುತ್ತದೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ಬೆಳೆ ಸಾಲ ಪಡೆದ ಮತ್ತು ಬೆಳೆ ಸಾಲ ಪಡೆಯದ ರೈತರು ಪ್ರಸಕ್ತ ಸಾಲಿನ ಪಹಣಿ ಪತ್ರಿಕೆ, ಆಧಾರ್​ ಕಾರ್ಡ್​ ಝೆರಾ ಪ್ರತಿ, ಬ್ಯಾಂಕ್​ ಪಾಸ್​ಬುಕ್​ ಪ್ರತಿಯೊಂದಿಗೆ ಹತ್ತಿರದ ಗ್ರಾಮ ಒನ್​ ಕೇಂದ್ರ ಅಥವಾ ಬ್ಯಾಂಕುಗಳಲ್ಲಿ ವಿಮಾ ಯೋಜನೆಯಡಿಯಲ್ಲಿ ನೋಂದಾಯಿಸಿಕೊಳ್ಳಬೇಕು.