ಢವಳಗಿ: ರಾಜ್ಯದಲ್ಲಿಯೇ ಹೆಚ್ಚು ಈರುಳ್ಳಿ ಬೆಳೆಯುವ ಜಿಲ್ಲೆಗಳ ಪಟ್ಟಿಯಲ್ಲಿ ವಿಜಯಪುರ ಎರಡನೇ ಸ್ಥಾನದಲ್ಲಿದೆ. ಅದರಲ್ಲಿ ಮುದ್ದೇಬಿಹಾಳ ತಾಲೂಕಿನೊಂದರಲ್ಲಿಯೇ 2000 ಎಕರೆ ಪ್ರದೇಶದಲ್ಲಿ ಈರುಳ್ಳಿ ಬೆಳೆಯಲಾಗಿದೆ. ಕೆಳೆ ಕೈಗೆ ಬರುವಷ್ಟರಲ್ಲಿ ಬೆಲೆ ಕುಸಿತದಿಂದಾಗಿ ರೈತರು ಹೈರಾಣಾಗಿದ್ದಾರೆ. ಕೆಲ ರೈತರು ಕಡಿಮೆ ಬೆಲೆಗೆ ಮಾರಿ ಕೈ ತೋಳಕೊಂಡರೆ ಇನ್ನೂ ಕೆಲವರು ಬೆಲೆ ಹೆಚ್ಚಾಗಬಹುದು ಎಂಬ ನಿರೀೆಯಲ್ಲಿ ಸಂಗ್ರಹಿಸಿಟ್ಟಿದ್ದಾರೆ.
ಮೂರು ತಿಂಗಳಾದರೂ ಬೆಲೆಯಲ್ಲಿ ಹೆಚ್ಚಳ ಕಂಡಿಲ್ಲ. ಮಳೆಗಾಲ ಆರಂಭವಾಗಿದ್ದರಿಂದ ಸಂಗ್ರಹಿಸಿಟ್ಟಿರುವ ಈರುಳ್ಳಿ ಕೊಳೆಯುತ್ತಿವೆ. ತಾಲೂಕಿನ ರೂಡಗಿ ಗ್ರಾಮದ ರೈತ ಬಸವರಾಜ ಈಳಗೇರ ಆರು ಎಕರೆ ಜಮೀನಿನಲ್ಲಿ ಬೆಳೆದ 800 ಪಾಕೇಟ್(ಬ್ಯಾಗ್) ಈರುಳ್ಳಿಯನ್ನು ಜೆಸಿಬಿ ಬಳಸಿ ಹೊಲಕ್ಕೆ ಚೆಲ್ಲಿ ಬೇಸರ ವ್ಯಕ್ತ ಪಡಿಸಿದ್ದಾನೆ.\
ಬಿಜ, ಗೊಬ್ಬರ, ಔಷಧಿ, ಕಟಾವು ಮಾಡುವುದು ಸೇರಿ ಪ್ರತಿ ಎಕರೆಗೆ 40 ರಿಂದ 60 ಸಾವಿರ ರೂ.ಖರ್ಚು ಮಾಡಿದ್ದಾನೆ. ಆದರೆ ಈಗಿನ ಬೆಲೆಗೆ ಬೆಂಗಳೂರು ಮಾರುಕಟ್ಟೆಗೆ ಹೋಗಿಬರುವ ಗಾಡಿ ಬಾಡಿಗೆ ಕೂಡ ಬರುವುದಿಲ್ಲ ಎಂದು ಗೋಳು ತೋಡಿಕೊಂಡಿದ್ದಾನೆ. 800 ಬ್ಯಾಗ್(ಪಾಕೇಟ್) ಈರುಳ್ಳಿಯನ್ನು ಹೊಲದ ಬದುವಿಗೆ ಹಾಕಿ ಸರ್ಕಾರದ ವಿರುದ್ಧ ಕಿಡಿ ಕಾರಿದ್ದಾನೆ.
ಬೆವರು ಸುರಿಸಿ ದುಡಿದು ಲಾಂತರ ರೂ. ಖರ್ಚು ಮಾಡಿ ಬೆಳೆದ ಬೆಳೆಯನ್ನು ಮಣ್ಣ್ಣು ಪಾಲಾಗಿಸುವುದು ಎಷ್ಟು ಕಷ್ಟದ ಕೆಲಸ. ಸರ್ಕಾರ ಇಂಥ ರೈತರ ಸಮಸ್ಯೆಗಳ ಬಗ್ಗೆ ಗಮನ ಹರಿಸುವುದು ಅಗತ್ಯವಾಗಿದೆ.