ಶ್ರೀಸಿದ್ಧರಾಮ ಶಿವಯೋಗಿ 
ಜಿಲ್ಲೆ

ಆಷಾಡ ಏಕಾದಶಿ ನಿಮಿತ್ತ ಪ್ರವಚನ

Vijayapura - Desk - Shamarao Kulkarni

ತಾಳಿಕೋಟೆ: ಇಲ್ಲಿನ ವಿಠ್ಠಲ ಮಂದಿರದಲ್ಲಿ ಆಷಾಢ ಏಕಾದಶಿ ನಿಮಿತ್ತ ಜು.2ರಿಂದ 6ರ ವರೆಗೆ ಪ್ರತಿ ದಿನ ಸಂಜೆ 6ರಿಮದ 7ರ ವರೆಗೆ ರನ್ನಬೇಳಗಲಿ ಮುಧೋಳ ಸಿದ್ಧಾರೂಡ ಮಠ ಶಿವಯೋಗಾಶ್ರಮದ ಶ್ರೀ ಸಿದ್ಧರಾಮ ಶಿವಯೋಗಿಗಳಿಂದ ಪ್ರವಚನ ಹಮ್ಮಿಕೊಳ್ಳಲಾಗಿದೆ.

ಜು.2ರಂದು ಸಂಜೆ 7ಕ್ಕೆ ಖಾಸ್ಗತೇಶ್ವರ ಮಠದ ಬಾಲಶಿವಯೋಗಿ ಶ್ರೀಸಿದ್ಧಲಿಂಗ ದೇವರು ಪ್ರವಚನಕ್ಕೆ ಚಾಲನೆ ನೀಡುವರು. ಜೋತಿಷಿ ವಸಂತ ಜೋಶಿ, ವೇಂಕಟೇಶ್ವರ ಪಾಠಶಾಲೆ ಅಧ್ಯ ವೆಂಕಟೇಶ ಗ್ರಾಮಪುರೋಹಿತ ಉಪಸ್ಥಿತರಿರುವರು ಎಂದು ವಿಠ್ಠಲ ಮಂದಿರ ಟ್ರಸ್ಟಿನ ಅಧ್ಯ ಸಂಭಾಜಿ ವಾಡ್ಕರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.