ತಾಳಿಕೋಟೆ: ಶಿಕ್ಷಣ ಜ್ಞಾನದ ಸಂಕೇತವಾಗಿದ್ದು, ಎಲ್ಲ ವಿದ್ಯಾರ್ಥಿಗಳು ಶಾಲೆಯಲ್ಲಿ ಕಲಿಸುವ ಶಿಕ್ಷಣದ ಜತೆ ವ್ಯವಹಾರಿಕ ಜ್ಞಾನ ಪಡೆದುಕೊಳ್ಳಬೇಕು ಎಂದು ಮುದ್ದೇಬಿಹಾಳ ಕ್ಷೇತ್ರ ಶಿಕ್ಷಣಾಧಿಕಾರಿ ಬಿ.ಎಸ್.ಸಾವಳಗಿ ಸಲಹೆ ನೀಡಿದರು.
ಪಟ್ಟಣದ ಎಸ್.ಎಸ್.ವಿದ್ಯಾ ಸಂಸ್ಥೆ ಸಭಾ ಭವನದಲ್ಲಿ ಗುರುವಾರ ಹಮ್ಮಿಕೊಂಡಿದ್ದ ವಿದ್ಯಾರ್ಥಿಗಳಿಗೆ ಸ್ವಾಗತ ಸಮಾರಂಭ ಹಾಗೂ ಎಚ್.ಎಸ್.ಪಾಟೀಲ ಮಹಿಳಾ ಪದವಿ ಮಹಾ ವಿದ್ಯಾಲಯ, ದೈಹಿಕ ಶಿಣ ಮಹಾ ವಿದ್ಯಾಲಯದ ಅಂತಿಮ ವರ್ಷದ ವಿದ್ಯಾರ್ಥಿಗಳಿಗೆ ಬೀಳ್ಕೊಡುಗೆ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದರು.
ಪಿಎಸ್ಐ ರಾಮನಗೌಡ ಸಂಕನಾಳ ಮಾತನಾಡಿ, ವಿದ್ಯಾರ್ಥಿಗಳು ಮೊಬೈಲ್ದಿಂದ ದೂರವಿರಬೇಕು. ಸೋಸಿಯಲ್ ಮೀಡಿಯಾ ಮೂಲಕ ಮೋಸ ಮಾಡುವ ಕೆಲಸ ನಡೆಯುತ್ತಿದೆ. ವಿದ್ಯಾರ್ಥಿಗಳು ಎಚ್ಚರಿಕೆಯಿಂದ ಮೊಬೈಲ್ ಬಳಸಬೇಕು ಎಂದರು.
ಗುಂಡಕನಾಳ ಹಿರೇಮಠದ ಶ್ರೀಗುರುಲಿಂಗ ಶಿವಾಚಾರ್ಯ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು.ತಹಸೀಲ್ದಾರ್ ಡಾ.ವಿನಯಾ ಹೂಗಾರ ಕಾರ್ಯಕ್ರಮ ಉದ್ಘಾಟಿಸಿದರು. ಎಚ್.ಎಸ್.ಪಾಟೀಲ ಅಧ್ಯಕ್ಷತೆ ವಹಿಸಿದ್ದರು.
ಅರ ದಾಸೋಹ ಸಹಾಯಕ ನಿರ್ದೇಶಕ ಎಂ.ಎಂ.ಬೆಳಗಲ್ಲ, ಪತ್ರಕರ್ತ ಜಿ.ಟಿ.ೂರ್ಪಡೆ, ಪಿರಾಪುರ ಸರ್ಕಾರಿ ಪ್ರೌಢ ಶಾಲೆ ಮುಖ್ಯೋಪಾಧ್ಯಾಯ ಆರ್.ಬಿ.ದಮ್ಮೂರಮಠ, ಸಂಸ್ಥೆ ಕಾರ್ಯದರ್ಶಿ ಸಚೀನ ಪಾಟೀಲ, ಆಡಳಿತಾಧಿಕಾರಿ ಕಿರಣ ಪಾಟೀಲ, ರವಿ ಪಾಟೀಲ, ಶಿಣ ಸಂಯೋಜಕ ಸುರೇಶ ಹಿರೇಮಠ, ಸಿಆರ್ಸಿ ರಾಜು ವಿಜಾಪೂರ ಉಪಸ್ಥಿತರಿದ್ದರು.
ಶಿಕ ಎಸ್.ಸಿ.ಗುಡಗುಂಟಿ ಸ್ವಾಗತಿಸಿದರು. ಎಸ್.ವ್ಹಿ.ಜಾಮಗೊಂಡಿ ಪ್ರಾಸ್ಥಾವಿಕ ಮಾತನಾಡಿದರು. ಬಿ.ಐ.ಹಿರೇಹೊಳಿ, ಶಿಕಿ ದೀಾ ದಾಯಪುಲೆ ನಿರೂಪಿಸಿದರು. ಪ್ರಕಾಶ ವಾಲಿಕಾರ ವಂದಿಸಿದರು.