ಮುದ್ದೇಬಿಹಾಳ: ಗ್ರಾಹಕರಿಗೆ ಸುಲಭವಾಗಿ ಸೇವೆ ನೀಡುವ ಉದ್ದೇಶದಿಂದ ಅಮಚೆ ಕಚೇರಿಗಳಲ್ಲಿ ಹೊಸ ತಂತ್ರಜ್ಞಾನ ಹೊಂದಿರುವ ಸಾಧನ ಅಳವಡಿಸಲಾಗಿದೆ ಎಂದು ಅಂಚೆ ನಿರೀಕಿ ಎಸ್.ಎಸ್.ಇಲಕಲ್ ಹೇಳಿದರು.
ಪಟ್ಟಣದ ಅಂಚೆ ಕಚೇರಿಯಲ್ಲಿ ಅಳವಡಿಸಲಾದ ಹೊಸ ತಂತ್ರಜ್ಞಾನ ಸಾಧನ ಉದ್ಘಾಟಿಸಿ ಮಾತನಾಡಿದ ಅವರು, ಮೊದಲು ಬಳಸುತ್ತಿದ್ದ ತಂತ್ರಜ್ಞಾನ ಸಾಧನಗಳು ಬಹಳ ಹಳೆಯದಾಗಿದ್ದವು ಹೀಗಾಗಿ ಗ್ರಾಹಕರಿಗೆ ತ್ವರಿತಗತಿಯಲ್ಲಿ ಸೇವೆ ಒದಲು ಸಾಧ್ಯವಾಗುತ್ತಿರಲಿಲ್ಲ. ಗ್ರಾಹಕರಿಗೆ ಉತ್ತಮ ಸೇವೆ ನೀಡುವ ಉದ್ದೇಶದಿಮದ ಕೇಂದ್ರತ ಸರ್ಕಾರ ಅಂಚೆ ಕಚೇರಿಗಳಲ್ಲಿ ನೂತನ ಯಂತ್ರಗಳನ್ನು ಅಳವಡಿಸುವ ಕಾರ್ಯ ಆಂಡಿದೆ ಎಂದರು.
ಮಂಜುನಾಥ ಗೊಂಡಕರ ಮಾತನಾಡಿ, ಅಂಚೆ ಕಚೇರಿಗಳಲ್ಲಿ ಎಪಿಟಿ 2.0 ಸಾಧನ ಅಳವಡಿಸಿದ್ದು, ಗ್ರಾಕರಿಗೆ ತ್ವರಿತ ಗತಿಯಲ್ಲಿ ಸೇವೆ ನೀಡುವ ಉದ್ದೇಶ ಹೊಂದಲಾಗಿದೆ ಎಂದರು.
ಪೋಸ್ಟ್ ಮಾಸ್ಟರ್ ಎಸ್.ಡಿ.ಆದಾಪುರ ಅಧ್ಯತೆ ವಹಿಸಿದ್ದರು. ನ್ಯಾಯವಾದಿ ಚೇತನ ಶಿವಶಿಂಪಿ, ಎಸ್.ವೈ.ಬೈಲಗೊಂಡ, ಎಸ್.ಐ.ಪಾಟೀಲ, ಸಿ.ಪಿ.ಜಾಧವ, ಸಂಜೀವ ಬ್ಯಾಲಾಳ, ಐ.ಬಿ.ರೇವಡಿಹಾಳ, ಸಂಗಮೇಶ ಮಡಿವಾಳರ, ಎಸ್.ಕೆ.ಅಂಬಿಗೇರ, ಉದಯ ಡೋಂಬರ, ರೇಖಾ ಈಳಗೇರ, ಮಂಜುಳಾ ಜಾವೂರ, ವಿಜಯಲಕ್ಷಿ$್ಮ ಮುರಾಳ ಪಾಲ್ಗೊಂಡಿದ್ದರು.
ಡಿ.ಎಸ್.ಮೇಲಿನಕೇರಿ ಪ್ರಾರ್ಥಿಸಿದರು. ಲಾವಪ್ಪ ಗುರಿಕಾರ ನಿರೂಪಿಸಿದರು. ಲಕ್ಷ$್ಮಣ ಲ್ಮಣ ಠಾಣಾಗುಂದಿ ಹೊಸ ಸಾಧನದ ಬಗ್ಗೆ ಬರೆದ ಹಾಸ್ಯ ಭರಿತ ಕವನ ವಾಚಿಸಿ ವಂದಿಸಿದರು.