ಇಂಡಿ ಪಟ್ಟಣದ ಪಶು ಸಂಗೋಪನಾ ಇಲಾಖೆಯ ಹೊರನೋಟ.  
ಜಿಲ್ಲೆ

ರೈತರಿಗೆ ಕೊಡುಗೆಯಾಗದ "ಅನುಗ್ರಹ'

Vijayapura - Desk - Shamarao Kulkarni

ಆಕಸ್ಮಿಕ ಮೃತಪಟ್ಟ ಜಾನುವಾರುಗಳಿಗೆ "ಅನುಗ್ರಹ ಕೊಡುಗೆ' ಯೋಜನೆಯಡಿ ಪಶು ಇಲಾಖೆಯ ಮೂಲಕ ಸರ್ಕಾರ ಪರಿಹಾರ ನೀಡಲು ಪ್ರಾರಂಭಿಸಿದ್ದು, ತಾಲೂಕಿನಲ್ಲಿ ಇಲ್ಲಿಯವರೆಗೆ ಕೇವಲ ಶೇ.46ರಷ್ಟು ರೈತರಿಗೆ ಈ ಯೋಜನೆಯ ಪ್ರಯೋಜನ ಸಿಕ್ಕಿದೆ.ಇನ್ನೂ ಶೇ.54 ರಷ್ಟು ರೈತರು ಈ ಯೋಜನೆಯಿಂದ ವಂಚಿತರಾಗಿದ್ದಾರೆ.

ಇಂಡಿ ತಾಲೂಕಿನಲ್ಲಿ 2024&25 ನೇ ಸಾಲಿನಲ್ಲಿ ಒಟ್ಟು 210 ಜಾನುವಾರುಗಳು ಮೃತತಪಟ್ಟಿದ್ದು, ಕೇವಲ 78 ರಾಸುಗಳಿಗೆ ಮಾತ್ರ ಪರಿಹಾರ ಹಣ ಲಭಿಸಿದೆ. ಇನ್ನೂ 132 ಜಾನುವಾರಗಳ ಮಾಲೀಕರಿಗೆ ಪರಿಹಾರ ದೊರೆತಿಲ್ಲ.

ಒಂದು ಹಸು, ಎತ್ತು, ಎಮ್ಮೆಗೆ ಹತ್ತು ಸಾವಿರ ದಂತೆ ಈಗಾಗಲೇ ಜಾನುವಾರುಗಳಿಗೆ 7 ಲ ರೂ.ಅವುಗಳ ಮಾಲೀಕರ ಬ್ಯಾಂಕ್​ ಖಾತೆಗೆ ಜಮಾವಾಗಿದೆ ಎಂದು ಪಶು ಸಂಗೋಪನೆ ಇಲಾಖೆ ಹಿರಿಯ ವೈದ್ಯಾಧಿಕಾರಿ ಡಾ. ರಾಜಕುಮಾರ ಅಡಕಿ ಮಾಹಿತಿ ನೀಡಿದದರು.

ಹೈನುಗಾರಿಕೆಯಿಂದ ಹಾಗೂ ಇನ್ನೂ ಕೆಲ ರೈತರು ಒಂದೆರಡು ಹಸುಗಳನ್ನು ಸಾಕಿಕೊಂಡು ಜೀವನ ಸಾಗಿಸಲು ಸಾಲ ಮಾಡಿ ಹಸುಗಳನ್ನು ತಂದಿದ್ದರು. ಆದರೆ ಅವುಗಳು ಆಕಸ್ಮಿಕವಾಗಿ ಮೃತಪಟ್ಟ ಸಂದರ್ಭದಲ್ಲಿ ದಿಕ್ಕು ದೋಚದಂತಾಗುತ್ತದೆ. ಅಂತಹವರಿಗೆ ರಾಜ್ಯ ಸರ್ಕಾರದಿಂದ ಅನುಗ್ರಹ ಯೋಜನೆಯಡಿ ಜಾನುವಾರುಗಳಿಗೆ ಹತ್ತು ಸಾವಿರ ರೂ. ಪರಿಹಾರ ನೀಡಲಾಗುತ್ತದೆ. ಆದರೆ 2024&25 ನೇ ಸಾಲಿನಲ್ಲಿ ಆಕಸ್ಮಿಕವಾಗಿ ಮರಣ ಹೊಂದಿದ ಜಾನುವಾರುಗಳಿಗೆ ಬರುವ ಪರಿಹಾರ ಧನವು ಸಂಪೂರ್ಣವಾಗಿ ಬಿಡುಗಡೆಯಾಗದ ಕಾರಣ ಕೆಲ ರೈತರು ಸಂಕಷ್ಟಕ್ಕೆ ಸಿಲುಕುವಂತಾಗಿದೆ.

ಈ ಯೋಜನೆಯಡಿ ಆಕಸ್ಮಿಕ ಮೃತಪಟ್ಟ ಕುರಿ ಹಾಗೂ ಮೇಕೆಗಳಿಗೂ ವಿತರಿಸಲಾಗುತ್ತಿದೆ. ಈ ಯೋಜನೆಯಡಿ ತಾಲೂಕಿನಲ್ಲಿ ಮೃತಪಟ್ಟಿರುವ 91 ಕುರಿ ಮತ್ತು ಮೇಕೆಗಳಿಗೆ ಪರಿಹಾರಬಂದಿದೆ. 2025 &26 ರಲಿ ್ಲ50 ಜಾನುವಾರು ಮತ್ತು 48 ಕುರಿ ಮೇಕೆಗಳಿಗೆ ಹಣ ಬರಬೇಕಿದೆ.

ಕುರಿ ಅಥವಾ ಮೇಕೆ ಎರಡು ವರ್ಷಕ್ಕೂ ಚಿಕ್ಕದಿದ್ದರೆ ರೂ. 2500 ಮತ್ತು ಎರಡು ವರ್ಷಕ್ಕಿಂತ ದೊಡ್ಡದಿದ್ದರೆ ಐದು ಸಾವಿರ ಹಣ ನೀಡಲಾಗುತ್ತದೆ.

ಏ. 2025 ರಿಂದ ಹಸು ಎಮ್ಮೆ ಎತ್ತು ಸತ್ತರೆ ರೂ 15 ಸಾವಿರ ಮತ್ತು ಕುರಿ ಮೇಕೆಗಳಿಗೆ ರೂ 7500 ನೀಡಲಾಗುತ್ತದೆ ಎಂದು ಡಾ. ಅಡಕಿ ತಿಳಿಸಿದರು