ಆಲಮೇಲ: ರಾಜ್ಯದಲ್ಲಿ ಇಂದಿರಾ ಕ್ಯಾಂಟಿನ್ ಯೋಜನೆ ಜಾರಿಗೆ ತರುವ ಮೂಲಕ ಬಡವರ ಹಸಿವು ಮುಕ್ತಗೊಳಿಸಿರುವ ಶ್ರೇಯಸ್ಸು ಮುಖ್ಯಮಂತ್ರಿ ಸಿದ್ದರಾಮಯ್ಯಗೆ ಸಲ್ಲುತ್ತದೆ ಎಂದು ಶಾಸಕ ಅಶೋಕ ಮನಗೂಳಿ ಹೇಳಿದರು.
ಶನಿವಾರ ಇಂಡಿ ರಸ್ತೆಯ ಯುಕೆಪಿ ಕ್ಯಾಂಪಿನ ಆವರಣದ ತಹಸೀಲ್ದಾರ್ ಕಚೇರಿ ಹತ್ತಿರ ನಿರ್ಮಾಣ ವಾಗಿರುವ ಇಂದಿರಾ ಕ್ಯಾಂಟಿನ್ ಉದ್ಘಾಟಿಸಿ ಮಾತನಾಡಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಕನಸಿನ ಯೋಜನೆ ಇದಾಗಿದೆ. ಬಡವರು ಹಸಿವಿನಿಂದ ಬಳಲಬಾರದು ಎಂದು ಕಡಿಮೆ ವೆಚ್ಚದಲ್ಲಿ ಗುಣಮಟ್ಟದ ಆಹಾರ ನಿಡುವ ಯೋಜನೆ ಜಾರಿಗೆ ತಂದರು. ಕಳೆದ ಅವಧಿಯಲ್ಲಿ ಬಿಜೆಪಿ ಮತ್ತು ಸಮ್ಮಿಶ್ರ ಸರ್ಕಾರ ಈ ಯೋಜನೆ ಸ್ಥಗಿತಗೊಳ್ಳಿಸಿತ್ತು ಎಂದರು.
ರಾಜಕೀಯದಲ್ಲಿ ಯಾವುದು ಶಾಸ್ವತವಲ್ಲ ಶಾಸ್ವತವಾಗಿರುವದು ನಾವು ಮಾಡಿರುವ ಪ್ರಾಮಾಣಿಕ ಸೇವೆ ಮಾತ್ರ, ಜನಪ್ರತಿನಿಧಿಯಾಗಿ ಸರ್ಕಾರದ ಯೋಜನೆಗಳು ಜನರಿಗೆ ತಲುಪಿಸುವ ಪ್ರಾಮಾಣಿಕ ಕೆಲಸ ಮಾಡಿದರೆ ಜೀವನ ಸಾರ್ಥಕವಾಗುತ್ತದೆ ಎಂದರು.
ಪ.ಪಂ ಅಧ್ಯ ಸಾಧೀಕ ಸುಂಬಡ ಮಾತನಾಡಿ, ಶಾಸಕ ಅಶೋಕ ಮನಗೂಳಿ ಅವರು ಆಲಮೇಲ ಪಟ್ಟಣ ಸೇರಿದಂತೆ ಹೊಸ ತಾಲೂಕಿನ ಅಭಿವೃದ್ಧಿಗೆ ಆದ್ಯತೆ ನೀಡುತ್ತಿದದ್ಆರೆ ಎಂದರು.
ಹಿರೇಮಠದ ಶ್ರೀ ಚಂದ್ರಶೇಖರ ಶಿವಾಚಾರ್ಯರು ಸಾನ್ನಿಧ್ಯ ವಹಿಸಿದ್ದರು. ಜಿಲ್ಲಾ ಯೋಜಾನಾಧಿಕಾರಿ ಕ್ರುದ್ದೀನ್ ಸೌದಾಗರ, ತಹಸೀಲ್ದಾರ್ಕೆ. ವಿಜಯಕುಮಾರ ಮಾತನಾಡಿದರು.
ಅಳ್ಳೊಳ್ಳಿಮಠದ ಶ್ರೀ ಶೈಲಯ್ಯ ಸ್ವಾಮೀಜಿ, ವಿದ್ಯಾಧರ ನ್ಯಾಮಗೊಂಡ, ಪ.ಪಂ. ಸಿ.ಒ ಸುರೇಶ ನಾಯಕ, ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ತಾಲೂಕು ಅಧ್ಯ ಅಶೋಕ ಕೊಳಾರಿ, ನಾಗರೀಕ ವೇದಿಕೆಯ ಅಧ್ಯ ರಮೇಶ ಬಂಟನೂರ, ಪ್ರಭು ವಾಲಿಕಾರ,ವಹಾಬ ಸುಂಬಡ ಇತರರಿದ್ದರು.