ತಾಳಿಕೋಟೆಯ ಈದ್ಗಾ ಮೈದಾನದಲ್ಲಿ ಮುಸ್ಲಿಂ ಬಾಂದವರು ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು.  
ಜಿಲ್ಲೆ

ಸಾಮರಸ್ಯೆ ಬೆಸೆಯುವ ಸಂಕೇತ

Vijayapura - Desk - Shamarao Kulkarni

ತಾಳಿಕೋಟೆ : ಬಕ್ರೀದ್​ ಪ್ರಯುಕ್ತ ಪಟ್ಟಣದ ಹೊಸ ಈದ್ಗಾ ಮೈದಾನದಲ್ಲಿ ಶನಿವಾರ ಮುಸ್ಲಿಂ ಬಾಂಧವರು ಸಾಮೂಹಿಕ ಪ್ರಾರ್ಥನೆ ಸಲ್ಲಿಸಿ ಪರಸ್ಪರ ಶುಭಾಶಯ ವಿನಿಮಯ ಮಾಡಿಕೊಂಡರು.

ನಂತರ ಧಾರ್ಮಿಕ ಮುಖಂಡ ಡಾ.ಮಿನಹಾಜುದ್ದೀನ ಖಾಜಿ ಮಾತನಾಡಿ, ಬಕ್ರೀದ್​ ಹಬ್ಬವು ಸಹೋದರತೆ ಮತ್ತು ಸಾಮರಸ್ಯೆ ಭಾವನೆ ಬೆಸೆಯುವ ಸಂಕೇತವಾಗಿದೆ ಎಂದರು. ಪ್ರವಾದಿ ಮಹ್ಮದರ ಆದರ್ಶಅನುದಿನ ಅನುಸರಿಸಿ, ಕೆಡುಕುಗಳಿಂದ ದೂರವಿದ್ದು ಉತ್ತಮ ಬದುಕು ರೂಪಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಧಾರ್ಮಿಕ ಮುಖಂಡ ಸಯ್ಯದ್​ ಶಕೀಲ್​ ಅಹಮದ್​ ಖಾಜಿ ಸಾಮೂಹಿಕ ಪ್ರಾರ್ಥನೆಯ ನೇತೃತ್ವ ವಹಿಸಿದ್ದರು.

ಹಫೀಜ ಇಬ್ರಾಹಿಂ ಮುಲ್ಲಾ, ಖಾಜಾಹುಸೇನ ಡೋಣಿ, ಗನಿಸಾಬ ಲಾಹೋರಿ, ಅಬ್ದುಲ್​ ರೆಹಮಾನ್​ ಎಕೀನ, ಅಲ್ಲಾಭ ನಮಾಜಕಟ್ಟಿ ಸಿಕಂದರ ವಠಾರ, ರಾಜ ಅಹ್ಮದ್​ ಒಂಟಿ, ಅಬ್ದುಲ್​ ರಜಾಕ್​ ಮನಗೂಳಿ, ಮಹೆಬೂಬ ಚೋರಗಸ್ತಿ, ಕೆ.ಐ.ಸಗರ,ಎಂ.ಎ. ಮೇತ್ರಿ, ರೋಷನ್​ ಡೋಣಿ, ಅಬ್ದುಲ್​ ಸತ್ತಾರ ಅವಟಿ, ಇಬ್ರಾಹಿಂ ಮನ್ಸೂರ, ಹಸನ್​ ಮನಗೂಳಿ, ಅಬ್ದುಲ್​ ರೆಹಮಾನ್​ ನಮಾಜಕಟ್ಟಿ, ಡಾ.ಎ.ಎ.ನಾಲಬಂದ, ಚಂದಾಹುಸೇನ ಖಾಂಜಾದೆ,ಎಸ್​.ಎ.ನಾಲಬಂದ, ಹಸನ ಸಾಬ ಕೊರ್ಕಿ, ಮುಸ್ತಾ ಚೌಧರಿ, ಮುಜಾಹೀದ ನಮಾಜಕಟ್ಟಿ ಪಾಲ್ಗೊಂಡಿದ್ದರು.