ಬಸವನಬಾಗೇವಾಡಿಯಲ್ಲಿ ದಿನ ಬಳಕೆ ವಸ್ತುಗಳನ್ನು ತಲೆ ಮೇಲೆ ಹೊತ್ತುಕೊಂಡು ಶಾಶ್ವತ ಪರಿಹಾರಕ್ಕಾಗಿ ಲಕ್ಷಿ$್ಮ ನಗರ ನಿವಾಸಿಗಳು ವಿನೂತನ ಪ್ರತಿಭಟನೆ ನಡೆಸಿದರು.  
ಜಿಲ್ಲೆ

ಶಾಶತ್ವ ಪರಿಹಾರಕ್ಕಾಗಿ ವಿನೂತನ ಪ್ರತಿಭಟನೆ

Vijayapura - Desk - Shamarao Kulkarni

ಬಸವನಬಾಗೇವಾಡಿ: ಮಳೆಯಿಂದ ಜಲಾವೃತಗೊಂಡಿರುವ ಲಕ್ಷಿ$್ಮ ನಗರ ನಿವಾಸಿಗಳಿಗೆ ಶಾಶ್ವತ ಪರಿಹಾರ ನೀಡಬೇಕೆಂದು ಆಗ್ರಹಿಸಿ ದಿನ ಬಳಕೆ ವಸ್ತುಗಳನ್ನು ತಲೆ ಮೇಲೆ ಹೊತ್ತುಕೊಂಡು ನಿವಾಸಿಗಳು ಅಂಬಿಗರ ಚೌಡಯ್ಯ ವೃತ್ತದಲ್ಲಿ ವಿನೂತನ ಪ್ರತಿಭಟನೆ ನಡೆಸಿ, ಬಾರಖೇಡ & ಬೀಳಗಿ ರಾಜ್ಯ ಹೆದ್ದಾರಿ ಮೇಲೆ ಧರಣಿ ಕೈಗೊಂಡರು.

ಶುಕ್ರವಾರ ರಾತ್ರಿ ಸುರಿದ ಭಾರಿ ಮಳೆಗೆ ಪಟ್ಟಣದ ಲಕ್ಷಿ$್ಮನಗರ ಜಲಾವೃತಗೊಂಡು ಅಂದಾಜು 40 ಮನೆಗಳಲ್ಲಿ ನೀರು ನುಗ್ಗಿದ್ದು, ದಿನ ಬಳಕೆ ವಸ್ತುಗಳು, ದವಸ ಧಾನ್ಯಗಳು ಹಾಳಾಗಿ 70 ಜನರು ನಿರಾಶ್ರಿತರಾಗಿದ್ದಾರೆ. ಶಾಶ್ವತ ಪರಿಹಾರ ನೀಡಬೇಕು. ಮಳೆಗಾಲದಲ್ಲಿ ಇದೇ ರೀತಿ ಮನೆಗಳಲ್ಲಿ ನೀರು ನುಗ್ಗಿ, ಕಷ್ಟ ಪಟ್ಟು ದುಡಿದು ಸಂಗ್ರಹಿಸಿದ ದವಸ ಧಾನ್ಯಗಳು ನೀರು ಪಾಲಾದರೆ ನಮ್ಮ ಗತಿ ಏನು ಎಂದು ನಿವಾಸಿಗಳು ಪ್ರಶ್ನಿಸಿದರು.

ಪ್ರತಿಭಟನೆ ಸ್ಥಳಕ್ಕೆ ಭೇಟಿ ನೀಡಿದ ತಹಸೀಲ್ದಾರ್​ ಯಮನಪ್ಪ ಸೋಮನಕಟ್ಟಿ ಮಾತನಾಡಿ, ತೊಂದರೆ ಆಗದಂತೆ ಎಚ್ಚರಿಕೆ ವಹಿಸಲಾಗುವುದು. ತಾಲೂಕು ಆಡಳಿತ ಹಾಗೂ ಪುರಸಭೆಯಿಂದ ಮುಂಜಾಗೃತೆ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.

ಪುರಸಭೆ ಮುಖ್ಯಾಧಿಕಾರಿ ರುದ್ರೇಶ ಚಿತ್ತರಗಿ ಪ್ರತಿಭಟನಾ ಸ್ಥಳಕ್ಕೆ ಆಗಮಿಸಿ ಪರಿಹಾರ ಕೊಡಿಸುವ ಭರವಸೆ ನೀಡಿದರು.

ನಗರಾಭಿವೃದ್ಧಿ ಕೋಶ ಯೋಜನಾಧಿಕಾರಿ ಬಿ.ಎ.ಸೌದಾಗರ ಜಲಾವೃತಗೊಂಡು ಹಾನಿಯಾದ ಲಕ್ಷಿ$್ಮ ನಗರ ಹಾಗೂ ಮೇಗಾ ಮಾರುಕಟ್ಟೆ ಪ್ರದೇಶಕ್ಕೆ ಭೇಟಿ ನೀಡಿ ಪರಿಶೀಲಿಸಿದರು.

ಬಡಾವಣೆ ಪ್ರಮುಖರಾದ ರಾಜು ಮುಳವಾಡ, ಪರಶುರಾಮ ಅಡಿಗಿಮನಿ, ಹನುಮಂತ ಕಾಮನಕೇರಿ, ಲಕ್ಷ$್ಮಣ ಅಂಬಿಗೇರ, ರಾಜು ಪಟ್ಟಣಶೆಟ್ಟಿ, ಲಕ್ಷ$್ಮಣ ಮುಳವಾಡ, ರಮೇಶ ಇಂಗಳೇಶ್ವರ, ಹನುಮಂತ ನಾಗರಾಳ, ಪ್ರಕಾಶ ಮಾಲಗಾರ, ಕಸ್ತೂರಿ ರಾಠೋಡ, ಸುಂದರವ್ವ ಮುಳವಾಡ, ಕಸ್ತೂರಿ ಪತ್ತಾರ, ಅಣ್ಣಕ್ಕ ಮುಳವಾಡ, ತಾರಾಬಾಯಿ ಮಾನೆ, ಗೌರಮ್ಮ ಪೈಠಾಣ, ಗಂಗಾಬಾಯಿ ಹಂಚರೆಡ್ಡಿ, ಶರಣಮ್ಮ ಮುಳವಾಡ, ರುಕ್ಮಿಣಿಬಾಯಿ ಗೌಡರ, ಅನಸುಬಾಯಿ ಬಡಿಗೇರ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

ಪುರಸಭೆ ಅಧ್ಯೆ ಜಗದೇವಿ ಗುಂಡಳ್ಳಿ, ಡಿವೈಎಸ್ಪಿ ಬಲ್ಲಪ್ಪ ನಂದಗಾವಿ, ಪಿ.ಐ.ಗುರುಶಾಂತ ದಾಶ್ಯಾಳ, ಪುರಸಭೆ ಜೆ.ಇ.ಮಹಾದೇವ ಜಂಬಗಿ, ಸಂತೋಷ ಗಿಡ್ಡ ಸಣ್ಣವರ, ಆರೋಗ್ಯ ಹಿರಿಯ ನಿರೀಕ ಮಹೇಶ ಹಿರೇಮಠ ಹಾನಿ ಸ್ಥಳಕ್ಕೆ ಭೇಟಿ ನೀಡಿದರು.