ಹೋರ್ತಿ: ಆಧ್ಯಾತ್ಮದಿಂದಲೇ ವಿಶ್ವದಲ್ಲಿ ಶಾಂತಿ ನೆಲೆಸಲು ಸಾಧ್ಯ ಎಂದು ನಾಗಠಾಣ ಶಾಸಕ ವಿಠ್ಠಲ ಕಟಕಧೋಂಡ ಹೇಳಿದರು.
ಏಳಗಿ (ಪಿಎಚ್) ಗ್ರಾಮದಲ್ಲಿ ಶ್ರೀ ವಿರಭದ್ರೇಶ್ವರ ಜಾತ್ರೆ ಹಮ್ಮಿಕೊಮಡಿದ್ದ ನಿಮಿತ್ತ ಧರ್ಮ ಸಭೆ ಉದ್ಘಾಟಿಸಿ ಮಾತನಾಡಿದ ಅವರು, ದೇವಸ್ಥಾನಗಳಲ್ಲಿ ಜರುಗುವ ಧಾರ್ಮಿಕ ಕಾರ್ಯಕ್ರಮ ಹಾಗೂ ಜಾತ್ರೆ &ಉತ್ಸವಗಳು ಸನ್ಮಾರ್ಗ ತೋರುವ ತೋರುತ್ತವೆ ಎಂದರು.
ಜೈನಾಪುರದ ಶ್ರೀ ರೇಣುಕಾ ಶಿವಾಚಾರ್ಯರು, ಹತ್ತಳ್ಳಿಯ ಗುರುಗುರುಪಾದೇಶ್ವರ ಶಿವಾಚಾರ್ಯರು, ಅಭಿನವ ರಾಚೋಟೇಶ್ವರ ಶಿವಾಚಾರ್ಯರು, ತಡವಲಾಗದ ಚಳಕಾಪುರ ಸಿದ್ದಾರೂಢಮಠದ ಶಂಕರಾನಂದ ಸ್ವಾಮೀಜಿ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು.
ತದ್ದೇವಾಡಿಯ ಮಹಾಂತೇಶ ಹಿರೇಮಠ ಶಾಸ್ತ್ರಿಗಳು, ವಿಧಾನ ಪರಿಷತ್ ಮಾಜಿ ಸದಸ್ಯ ಬಿ ಜಿ. ಪಾಟೀಲ್, ಬಿಜೆಪಿ ಜಿಲ್ಲಾಧ್ಯ ಗುರುಲಿಂಗಪ್ಪ ಅಂಗಡಿ, ಹೊರ್ತಿ ಶಾಂತೇಶ್ವರ ಸಹಕಾರಿ ಸಂದ ಅಧ್ಯ ಶ್ರೀಮಂತ ಇಂಡಿ, ವಿಜಯಪುರ ಬಂಜಾರ ಶಿಣ ಸಂಸ್ಥೆ ಅಧ್ಯ ಡಿ.ಎಲ್.ಚವ್ಹಾಣ, ಭೀಮಾಶಂಕರ ಸಹಕಾರಿ ಸಕ್ಕರೆ ಕಾರ್ಖಾನೆ ಉಪಾಧ್ಯ ಎಂ.ಆರ್. ಪಾಟೀಲ, ನಾಗೇಂದ್ರ ಬಿರಾದಾರ, ಶಶಿಧರ ಕಲ್ಯಾಣಶೆಟ್ಟಿ, ಅಶೋಕ ಕುಲಕರ್ಣಿ, ಧನರಾಜ ಮುಜಗೊಂಡ, ಚಂದ್ರಕಾಂತ ರಾಂಪುರ, ಸಾಹೇಬಗೌಡ ಬಿರಾದಾರ, ತುಕಾರಾಮ ಬೇಗಾರ, ಅಶೋಕಗೌಡ ಪಾಟೀಲ ಪಾಲ್ಗೊಂಡಿದ್ದರು.