ಇಂಡಿಯ ಕಾಳಿಕಾ ದೇವಿ ದೇವಸ್ಥಾನದ ಸಭಾಭವನದಲ್ಲಿ ತಾಲೂಕು ವಿಶ್ವಕರ್ಮ ಸಮಾಜ ವಿಕಾಸ ಸಂಸ್ಥೆ ಹಮ್ಮಿಕೊಂದಿದ್ದ ಸಾಮೂಹಿಕ ಉಪನಯನ ಕಾರ್ಯಕ್ರಮ,ಧರ್ಮ ಸಭೆಯನ್ನು ಮೌನೇಶ್ವರ ಶ್ರೀಗಳು ಉದ್ಘಾಟಿಸಿದರು.ಪವಿತ್ರಾ ಪ್ರಭಾಕರ ಆಚಾರ್ಯಭೀಮರಾಯ ಬಡಿಗೇರ,ಅನೀಲ ಬಡಿಗೇರ ಇತರರಿದ್ದರು. 
ಜಿಲ್ಲೆ

ಮಹಾತ್ಮರನ್ನು ಸ್ಮರಿಸುವಲ್ಲಿ ವಿಶ್ವಕರ್ಮ ಮಾದರಿ

Vijayapura - Desk - Shamarao Kulkarni

ಇಂಡಿ: ಸಮಾಜ ಸುಧಾರಕರು, ಶರಣರು, ಸಾಧಕರನ್ನು ಸ್ಮರಿಸುವ ಕಾರ್ಯಕ್ಕೆ ವಿಶ್ವಕರ್ಮ ಸಮುದಾಯ ಮಾದರಿಯಾಗಿದೆ ಎಂದು ಅಜಲಪುರ ವಿಶ್ವಕರ್ಮ ಜಗದ್ಗುರು ಮೂರುಘಾವಧೀಶ್ವರ ಸಂಸ್ಥಾನಮಠದ ಶ್ರೀಮೌನೇಶ್ವರ ಶ್ರೀಗಳು ಹೇಳಿದರು.

ಪಟ್ಟಣದ ಕಾಳಿಕಾದೇವಿ ದೇವಸ್ಥಾನದ ಸಭಾಭವನದಲ್ಲಿ ತಾಲೂಕು ವಿಶ್ವಕರ್ಮ ಸಮಾಜ ವಿಕಾಸ ಸಂಸ್ಥೆ ಹಮ್ಮಿಕೊಂಡಿದ್ದ ಕಾಳಿಕಾ ದೇವಿ ಜಾತ್ರೆ ಮತ್ತು ಸಾಮೂಹಿಕ ಉಪನಯನ ಮತ್ತು ಧರ್ಮಸಭೆಯಲ್ಲಿ ಮಾತನಾಡಿದರು.

ಪವಿತ್ರಾ ಪ್ರಭಾಕರ ಆಚಾರ್ಯ ಮಾತನಾಡಿ, ಪ್ರತಿ ಹಂತದಲ್ಲೂ ಸಮಾಜ ಬದಲಾಗುತ್ತ ಬಂದಿದ್ದರ ಹಿಂದೆ ವಿಶ್ವಕರ್ಮರಂತಹ ಮಹಾನ ವ್ಯಕ್ತಿಗಳ ಪಾತ್ರವಿದೆ. ವಿಶ್ವಕರ್ಮರ ಪ್ರಗತಿಪರ ವಿಚಾರಗಳನ್ನು ಅಳವಡಿಸಿಕೊಳ್ಳಬೇಕು ಎಂದರು.

ಬೋರಗಿ ತೆರದಾಳದ ಮಹಾಲಿಂಗೇಶ್ವರ ಶ್ರೀ,ಬರಡೋಲದ ಪ್ರಣವ ಭಾಸ್ಕರಾನಂದ ಶ್ರೀ, ಹಿಕ್ಕಣಗುತ್ತಿಯ ಪ್ರಭುಲಿಂಗ ಶ್ರೀ, ಆಲಮೇಲದ ಮುರಳಿ ಮುತ್ಯಾ, ಇಂಡಿಯ ವಿಠ್ಠಲಾಚಾರ್ಯ, ತಾಲೂಕು ವಿಶ್ವಕರ್ಮ ಸಮಾಜ ವಿಕಾಸ ಸಂಸ್ಥೆ ಅಧ್ಯ ಭೀಮರಾಯ ಬಡಿಗೇರ,ಅನೀಲ ಬಡಿಗೇರ, ಲಕ್ಷಿ$್ಮ ಭಾಸ್ಕರ ಬಡಿಗೇರ, ವಾಣಿ ಕಲ್ಲೂರ, ದತ್ತಾತ್ರೇಯ ಸುತಾರ, ನರಸಿಂಹ ಬಡಿಗೇರ, ಮೌನಪ್ಪ ಬಡಿಗೇರ ಮಾತನಾಡಿದರು.

ದೇವಿಗೆ ಮಹಾಭಿಷೇಕ, ಹೋಮಹವನ, ಸುಮಂಗಲೆಯರಿಂದ ಉಡಿ ತುಂಬುವ ಕಾರ್ಯಕ್ರಮ ನಡೆಯಿತು. 50 ವಟುಗಳಿಗೆ ಬ್ರಹ್ಮಪೋದೇಶ, ವಟುಗಳಿಗೆ ಅತಾ ಕಾರ್ಯಕ್ರಮ ನಂತರ ಕಾಶಿಯಾತ್ರೆ ಮಧ್ಯಾನ್ಹ 12ಕ್ಕೆ ಪುರವಂತರ ಸೇವೆಯೊಂದಿಗೆ ನಗರದ ಪ್ರಮುಖ ಬೀದಿಗಳಲ್ಲಿ ಪಲ್ಲಕ್ಕಿ ಉತ್ಸವ ಜರುಗಿತು.